ಜಿಲ್ಲೆ

ಅಕ್ರಮ ಮರಳುಗಾರಿಕೆ ಅವ್ಯಾಹತ

Uttara Kannada - Subash Hegde

ಕಾರವಾರ:ಕಾಳಿ ನದಿಯಲ್ಲಿ ನಡೆಯುತ್ತಿರುವ ಅಕ್ರಮ ಮರಳುಗಾರಿಕೆಯನ್ನು ತಡೆಯುವಂತೆ ಕಾಳಿ ನದಿ ಉಸುಕು ಗುತ್ತಿಗೆದಾರರ ಸಂಘ ಜಿಲ್ಲಾಧಿಕಾರಿ ಗಂಗೂಬಾಯಿ, ಎಸ್‌ಪಿ ವಿಷ್ಣುವರ್ಧನ, ಅವರಿಗೆ ಮನವಿ ಮಾಡಿದೆ. ಕ್ರಮ ವಹಿಸದೇ ಇದ್ದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದೆ.

ಪಾರಂಪರಿಕವಾಗಿ ಮರಳು ಗಣಿಗಾರಿಕೆ ನಡೆಸಿಕೊಂಡು ಬಂದ ನಾವು ಜಿಲ್ಲಾಧಿಕಾರಿ ಅವರ ಆದೇಶದಂತೆ ಮರಳುಗಾರಿಕೆಯನ್ನು ಬಂದ್ ಮಾಡಿದ್ದೇವೆ. ಪರವಾನಗಿಗಾಗಿ ಕಾಯುತ್ತಿದ್ದೇವೆ.

ಆದರೆ, ಕಾಳಿ ನದಿಯಲ್ಲಿ ಸದಾಶಿವಗಡ, ಹೋಟೆಗಾಳಿ, ಹಣಕೋಣ ಜೂಗ ಬ್ರಿಜ್, ಹಳಗೆಜೂಗ್, ಹಳಗಾ, ಉಳಗಾ, ಭೈರೆ, ಬೋಳೆ, ಕೆರವಡಿ, ಕರ್ಕಲ್, ಸಿದ್ದರ, ನಂದನಗದ್ದಾ, ಸುಂಕೇರಿ, ಗಾಬೀತವಾಡ, ಶಿವಾಜಿವಾಡ, ಮುಂತಾದೆಡೆ ಅಕ್ರಮ ಮರಳುಗಾರಿಕೆ ನಿರಂತರವಾಗಿ ನಡೆದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಹಾಗೂ ಉಪವಿಭಾಗಾಽಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ದೂರಿದರೂ ಕ್ರಮವಾಗಿಲ್ಲ. ಇದರಿಂದ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ಇದೆ. ಈ ಕುರಿತು ತಕ್ಷಣ ಕ್ರಮ ವಹಿಸಬೇಕು ಎಂದು ಸಂಘದ ಸದಸ್ಯರು ಮನವಿ ಮಾಡಿದರು.

ದಿಗಂಬರ ಶೇಟ್, ಅರವಿಂದ ಕಲ್ಗುಟಕರ್, ಪಾಂಡುರಂಗ ಪೆಡ್ನೇಕರ್, ಪಾಂಡುರಂಗ ರೇವಂಡಿಕರ್, ಸಂತೋಷ ಗೋವೆಕರ್, ಪ್ರಭಾಕರ ನಾಗೇಕರ್, ಉದಯ ಕೊಠಾರಕರ್, ವಿಜಯ ಪಡುವಳಕರ್, ಶ್ರವಣ ಶಿರೋಡಕರ್ ಇದ್ದರು.