ಹಾವೇರಿ: ಯಾವುದೆ ಪರವಾನಗಿ ಇಲ್ಲದೆ ಅಕ್ರಮ ಮರಳನ್ನು ಮಾರಾಟ ಮಾಡಲು ಸಂಗ್ರಹಿಸಿ ದಾಸ್ತಾನು ಮಾಡಿಕೊಂಡಿದ್ದ ಐವರ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹಾವನೂರ ಗ್ರಾಮದ ಮುತ್ತಪ್ಪ ಕಿಳ್ಳಿಕ್ಯಾತರ(37), ಆನಂದ ಕಿಳ್ಳಿಕ್ಯಾತರ (35), ಮೆಹಬೂಬಲಿ ಮುಜಾವರ, ಗಣೇಶ ಕಿಳ್ಳಿಕ್ಯಾತರ (45), ಸುಭಾಸ್ ಕಿಳ್ಳಿಕ್ಯಾತರ (40) ಎಂಬುವವರ ವಿರುದ್ದ ಹಾವೇರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಕಾರಿ ಡಾ. ಶಬ್ಬೀರಅಹ್ಮದ ದಿಡಗೂರ ದೂರು ದಾಖಲಿಸಿದ್ದಾರೆ.
ಆರೋಪಿತರು ತುಂಗಭದ್ರಾ ನದಿಯಿಂದ ಹರಳಹಳ್ಳಿ ಗ್ರಾಮದ ನದಿ ಪಾತ್ರದಲ್ಲಿ ಯಾವುದೇ ಪರವಾನಗಿ ಪಡೆದುಕೊಳ್ಳದೆ ಅಕ್ರಮವಾಗಿ ಮರಳು ಮಾರಾಟ ಮಾಡಲು ಸುಮಾರು 1.70ಲಕ್ಷ ರೂ. ಮೌಲ್ಯದ 200 ಮೆಟ್ರಿಕ್ ಟನ್ ಮರಳನ್ನು ಸಂಗ್ರಹಿಸಿಟ್ಟುಕೊಂಡಿದ್ದರು. ದಾಳಿ ಮಾಡಿದ ಕಾಲಕ್ಕೆ ಆರೋಪಿತರು ಓಡಿ ಹೋಗಿದ್ದಾರೆಂದು ಎಫ್ಐಆರ್ನಲ್ಲಿ ತಿಳಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.