ಜಿಲ್ಲೆ

1.73 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ಜಪ್ತಿ

ಮರಿದೇವ ಹೂಗಾರ

ಹುಬ್ಬಳ್ಳಿ: ಅಕ್ರಮ ಮದ್ಯ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಸಾವಿರಾರು ರೂಪಾಯಿ ಮದ್ಯ ಹಾಗೂ ಒಂದು ಕಾರ್ ವಶಪಡಿಸಿಕೊಂಡ ಘಟನೆ ತಾಲೂಕಿನ ವರೂರು ಗ್ರಾಮದ ಬಳಿ ನಡೆದಿದೆ.

ಯಾವುದೇ ಪರವಾನಗಿ ಇಲ್ಲದೆ ಬು.ಅರಳಿಕಟ್ಟಿ ಗ್ರಾಮದ ಗುರುರಾಜ ಸಂದಿಮಣಿ (28) ಎಂಬಾತ ಅಕ್ರಮ ಮದ್ಯ ಸಾಗಿಸುತ್ತಿದ್ದ. 1,73,970 ರೂ. ಮೌಲ್ಯದ 17.280 ಲೀ ಮದ್ಯ ಹಾಗೂ 37.200 ಲೀ ಬಿಯರ್ ಬಾಟಲ್‌ಗಳನ್ನು ಕಾರಿನಲ್ಲಿ ಹಳ್ಳಿಗಳಿಗೆ ಸಾಗಣೆ ಮಾಡುತ್ತಿದ್ದ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಖಚಿತ ಮಾಹಿತಿ ಮೇರೆಗೆ ಅಬಕಾರಿ ಇಲಾಖೆ ಅಧಿಕಾರಿ ಐ.ಡಿ. ಕಿತ್ತೂರ, ಸಿಬ್ಬಂದಿ ಕೆ.ಎನ್. ಕಮ್ಮಾರ, ಎಸ್.ಐ.ಬುಲಿ, ಶೇಖರ ಜ್ಯೋತಿ ದಾಳಿ ನಡೆಸಿದ್ದರು.