ದಾವಣಗೆರೆ: ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಹಣ ದುರುಪಯೋಗ, ನಕಲಿ ಜಾಬ್ ಕಾರ್ಡ್ ಸೃಷ್ಟಿ ಸೇರಿದಂತೆ ನಿಯಮಾವಳಿ ಉಲ್ಲಂಘಿಸಿದ ಜಗಳೂರು ತಾಲೂಕಿನ 22 ಗ್ರಾ.ಪಂ.ಗಳ 43 ನೌಕರರ ವಿರುದ್ಧ ದಾವಣಗೆರೆ ಜಿಲ್ಲಾ ಪಂಚಾಯಿತಿ ಶಿಸ್ತು ಕ್ರಮ ಕೈಗೊಳ್ಳುವ ಮೂಲಕ ರಾಜ್ಯಕ್ಕೆ ಮಾದರಿಯಾಗಿದೆ.
ಪಿಡಿಒ, ಡಿಇಒ, ತಾಂತ್ರಿಕ ಸಹಾಯಕರು ಸೇರಿದಂತೆ 18 ಜನರನ್ನು ಸೇವೆಯಿಂದ ವಜಾ ಮಾಡಿ ಆದೇಶ ಹೊರಡಿಸಲಾಗಿದ್ದರೆ, 9 ಪಿಡಿಒಗಳನ್ನು ಅಮಾನತು ಪಡಿಸಲಾಗಿದೆ. 16 ನೌಕರರಿಗೆ ಎಚ್ಚರಿಕೆ ನೋಟಿಸ್ ಜಾರಿ ಮಾಡಲಾಗಿದೆ. ಸರ್ಕಾರಕ್ಕೆ ನಷ್ಟ ಮಾಡಿದ ಹಿನ್ನೆಲೆಯಲ್ಲಿ 19 ನೌಕರರಿಗೆ 5.66ಲಕ್ಷ ರೂ.ದಂಡ ವಿಧಿಸಿದ್ದು ವಾರದೊಳಗೆ ಪಾವತಿಸಲು ಸೂಚಿಸಲಾಗಿದೆ. ವಜಾ ಆದವರ ಪೈಕಿ ನಾಲ್ವರು ಇಂಜಿನಿಯರ್, ಏಳು ಜನ ಡೇಟಾ ಆಪರೇಟರ್ಸ್ ಹೊರಗುತ್ತಿಗೆಯಡಿ ಕೆಲಸ ಮಾಡುತ್ತಿದ್ದರು.
ಮೈಸೂರು , ಬೀದರ್, ಶಿವಮೊಗ್ಗ, ರಾಮನಗರ ಜಿಪಂ ಉಪ ಕಾರ್ಯದರ್ಶಿಗಳ ನೇತೃತ್ವದ ರಾಜ್ಯ ಮಟ್ಟದ ತನಿಖಾ ತಂಡದ ವರದಿ ಆಧರಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ದಾವಣಗೆರೆ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪದ್ಮಾ ಬಸವಂತಪ್ಪ ಗುರುವಾರ ತಿಳಿಸಿದ್ದಾರೆ. 2017-18, 2018-19ನೇ ಸಾಲಿನ ಕಾಮಗಾರಿಗಳ ಬಗ್ಗೆ ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ರಾಜ್ಯ ಗ್ರಾಮೀಣಾಭಿವೃದ್ಧಿ ಆಯುಕ್ತರು ತನಿಖೆಗೆ ಆದೇಶಿಸಿದ್ದರು.
ಜಿಪಂ ಇತಿಹಾಸದಲ್ಲೇ ಮೊದಲು
ದಾವಣಗೆರೆ ಜಿಪಂ ಇತಿಹಾಸದಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯ ನೌಕರರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತಿರುವುದು ಇದೇ ಮೊದಲು. ಅಕ್ರಮಕ್ಕೆ ಪ್ರಚೋದನೆ ನೀಡಿದ ಪ್ರಭಾವಿಗಳು ಬಚಾವಾಗಿದ್ದು, ಅವರ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಸಿಇಒ ಹಾಗೂ ಸದಸ್ಯರು ಕೋರಿದರು.
ತನಿಖಾ ತಂಡ ಗುರುತಿಸಿದ ಲೋಪ