ಜಿಲ್ಲೆ

ಗೊರಬಾಳ ರಸ್ತೆಯಲ್ಲಿ ಫ್ರೆಂಡ್ಸ್ ಗಡಗಿ ಡಾಬಾ ನಡೆಸುತ್ತಿದ್ದ ಯುವಕ ಆತ್ಮಹತ್ಯೆ

Bagalkot

ಇಳಕಲ್ಲ(ಗ್ರಾ): ಅನಾಥ ಪ್ರಜ್ಞೆ ಕಾಡುತ್ತಿದ್ದ ಯುವಕನೋರ್ವ ತನ್ನ ಡಾಬಾದಲ್ಲಿ ಭಾನುವಾರ ಬೆಳಗ್ಗೆ 8 ಗಂಟೆಗೆ ನೇಣುಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೀಮಸಿ ಲಕ್ಷ್ಮಣ ಚಿತ್ತರಗಿ (22) ಮೃತ ಯುವಕ.

ರಾಷ್ಟ್ರೀಯ ಹೆದ್ದಾರಿ 50ರ ಪಕ್ಕದ ಗೊರಬಾಳ ರಸ್ತೆಯಲ್ಲಿ ಫ್ರೆಂಡ್ಸ್ ಗಡಗಿ ಡಾಬಾವನ್ನು ನಡೆಸುತ್ತಿದ್ದನು. ತಂದೆ ಮತ್ತು ತಾಯಿ ತೀರಿ ಹೋಗಿದ್ದ ಕಾರಣ ಆತನಿಗೆ ಆಗಾಗ ಅನಾಥ ಪ್ರಜ್ಞೆ ಕಾಡುವ ಜತೆಗೆ ತನ್ನ ಮದುವೆ ಹೇಗೆ ಎಂಬ ಪ್ರಶ್ನೆಯೂ ಮೂಡುತ್ತಿತ್ತು. ಇದರಿಂದಾಗಿ ತನ್ನ ಡಾಬಾದಲ್ಲಿನ ಕೊಠಡಿವೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ.

ಇಳಕಲ್ಲ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್‌ಐ ರಮೇಶ ಜಲಗೇರಿ ತನಿಖೆ ನಡೆಸಿದ್ದಾರೆ.