ಜಿಲ್ಲೆ

ಉತ್ತಮ ಸೇವೆ ಸಾರಿಗೆ ಸಂಸ್ಥೆ ಗುರಿಯಾಗಲಿ

ಇಳಕಲ್ಲ: ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಸಲ್ಲಿಸುವುದು ಸಾರಿಗೆ ಸಂಸ್ಥೆ ಗುರಿಯಾಗಬೇಕು. ಆಗಲೇ ಪ್ರಯಾಣಿಕರ ಪ್ರೀತಿ ಗಳಿಸಲು ಸಾಧ್ಯ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ನಗರದ ಬಸ್ ಘಟಕದ ವತಿಯಿಂದ ಎರಡು ನೂತನ ಮಾರ್ಗಗಳಾದ ಇಳಕಲ್ಲ-ಬೆಂಗಳೂರು ಎಸಿ ರಹಿತ ಸ್ಲೀಪರ್ ಬಸ್ ಹಾಗೂ ಇಳಕಲ್ಲ-ಮುಂಬೈ ಬಸ್ ಸಂಚಾರಕ್ಕೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಎರಡು ಮಾರ್ಗದ ಬಸ್‌ಗಳನ್ನು ಆರಂಭಿಸುವಂತೆ ಹೋರಾಟಗಾರರು ಮನವಿ ಕೊಟ್ಟಿದ್ದರು. ಈ ವಿಷಯವಾಗಿ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ ಈ ಬಸ್ ಸಂಚಾರ ಆರಂಭಿಸಲಾಗಿದೆ ಎಂದರು.

ಸಾರಿಗೆ ಘಟಕದ ವ್ಯವಸ್ಥಾಪಕ ಬಿ.ಎನ್. ಗೆಣ್ಣೂರ ಪ್ರಾಸ್ತಾವಿಕವಾಗಿ ಮಾತನಾಡಿ, ಈ ಎರಡು ಬಸ್‌ಗಳ ಸೇವೆಯನ್ನು ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದರು.

ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಮಹಾಂತಗೌಡ ಪಾಟೀಲ, ಹಿರಿಯರಾದ ದಿಲೀಪ ದೇವಗಿರಕರ, ಶ್ಯಾಮಸುಂದರ ಕರವಾ, ಮಹಾದೇವಸಾ ಕಾಟವಾ, ಮಹಾಂತೇಶ ಮಠ, ಸಂಗಮೇಶ ಚಳಗೇರಿ ಇತರರು ಇದ್ದರು.

EndFragment