- ನಿದೇಶಕ ರೋಹಿತ ಕುಲಕರ್ಣಿ ಘೋಷಣೆ
ವಿಜಯವಾಣಿ ಸುದ್ದಿಜಾಲ ಬೆಳಗಾವಿ
ಪ್ರಸ್ತುತ ಇಂಜಿನಿಯರ್ ಸೇರಿ ವಿವಿಧ ಪದವಿಗಳಿಗಿಂತ ಕೌಶಲ್ಯ ಆಧಾರಿತ ತರಬೇತಿ ಕೋಸ್೯ಗಳಿಗೆ ಹೆಚ್ಚು ಬೇಡಿಕೆ ಬರುತ್ತಿದೆ ಎಂದುವಿಟಿಯು ರಜಿಸ್ಟ್ರಾರ್ ಡಾ.ಬಿ.ರಂಗಸ್ವಾಮಿ ಹೇಳಿದರು.
ನಗರದ ಖಾಸಗಿ ಹೋಟೆಲ್ ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ಬನಶಂಕರಿ(ಎಸ್ ಬಿ) ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಹಿತಿ ತಂತ್ರಜ್ಞಾನ, ಸ್ಪರ್ಧಾತ್ಮಕ ಯುಗದಲ್ಲಿ ಹೊಸದಾಗಿ ಶಿಕ್ಷಣ ಕ್ರಾಂತಿ ಆಗುತ್ತಿದೆ. ಹೊಸ ಶಿಕ್ಷಣ ನೀತಿ, ಕೈಗಾರಿಕಾ ನೀತಿಗಳಿಂದ ಉದ್ಯೋಗ ಆಧಾರಿತ ಕೋಸ್೯ಗಳಿಗೆ ಆದ್ಯತೆ ಸಿಗುತ್ತಿದೆ ಎಂದರು.
ಎಸ್ ಬಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ನಿರ್ದೇಶಕ ಮಾತನಾಡಿ, ಕೌಶಲ್ಯ ಆಧಾರಿತ ಕೋಸ್೯ಗಳ ಕಲಿಕೆ,ತರಬೇತಿ
ಕೈಗಾರಿಕೆಗಳಿಗೆ ಅವಶ್ಯಕತೆ ಯಿರುವ ಕೋಸ್೯ಗಳ ತರಬೇತಿ ನೀಡಲಾಗುವುದು.ಹಾಡ್೯ವೇರ, ನೆಣವರ್ಕಿಂಗ್ ಕೋಸ್೯ಗಳಿಗೆ ಮೊದಲ ಆದ್ಯತೆ. ಶೇ.೧೦೦ರಷ್ಟು ಉದ್ಯೋಗ ಸಿಗಲಿದೆ. ಮುಂಬರುವ ದಿನಗಳಲ್ಲಿ ಐಟಿ ಬಿಟಿ ಕ್ಷೇತ್ರಗಳಲ್ಲಿ ಹೊಸ ಹೊಸ ಕೋಸ್೯ಗಳು ಆರಂಭಿಸಲಾಗುವುದು. ಕೋಸ್ ೯ ಗೆ ಕನಿಷ್ಠ ದ್ವೀತಿಯ ಪಿಯುಸಿ ಮುಗಿಸಿರಬೇಕು.ಆಪ್ ಲೈನ್ ಕೋಸ್೯ಗಳು ಇರುತ್ತವೆ. ಹತ್ತು ಬಡ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ, ಉದ್ಯೋಗ ಕಲ್ಪಿಕೊಡಲಾಗುವುದು ಎಂದು ಘೋಷಿಸಿದರು.
ಎಸ್ ಬಿ ಇನ್ಪೋಟೆಕ್ ಕಂಪನಿ ಸಂಸ್ಥಾಪಕ ವಸಂತರಾವ್ ಕುಲಕರ್ಣಿ, ಎಸ್ ಬಿ ಇನ್ಪೋಟೆಕ್ ಪ್ರೈವೆಟ್ ಲಿಮಿಟೆಡ್ ಅಧ್ಯಕ್ಷೆ ರತ್ನಾ ಕುಲಕರ್ಣಿಉಪಾಧ್ಯಕ್ಷ ರಘುವೀರ ಕುಲಕರ್ಣಿ, ರೋಹಿತ ಕುಲಕರ್ಣಿ, ಚೇತನಾ ಕುಲಕರ್ಣಿ, ವಿಟಿಯು ಪ್ರೊ. ಶ್ರೀಕಾಂತ ಅಂಬೇಕರ್, ಡಾ.ಎಸ್.ಬಿ. ಹಾಲಬಾವಿ ಇತರರಿದ್ದರು.
...