ಬೆಂಗಳೂರು: ಇಂಟರ್ನ್ಯಾಷನಲ್ ಇನ್ಸ್ಟ್ಟಿಟ್ಯೂಟ್ ಆಫ್ ಇನ್ಫಮೇರ್ಷನ್ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಸಂಸ್ಥೆಯ 24ನೇ ಘಟಿಕೋತ್ಸವ ಭಾನುವಾರ ಎಲೆಕ್ಟ್ರಾನಿಕ್ಸ್ ಸಿಟಿ ಕ್ಯಾಂಪಸ್ನಲ್ಲಿ ನಡೆಯಿತು.
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ. ಅಭಯ್ ಕರಂಡಿಕರ್, ಐಐಐಟಿ-ಬಿ ಆಡಳಿತ ಮಂಡಳಿ ಅಧ್ಯಕ್ಷ ಕ್ರಿಸ್ ಗೋಪಾಲಕೃಷ್ಣನ್ ಪದವಿ ಪ್ರದಾನ ಮಾಡಿದರು. 343 ವಿದ್ಯಾರ್ಥಿಗಳು ಪದವಿ ಹಾಗೂ 11 ಜನರು ಪಿಎಚ್ಡಿ ಪದವಿ ಪಡೆದರು.
ಐಐಐಟಿ-ಬಿ ನಿರ್ದೇಶಕ ಪ್ರೊ. ದೇಬಬ್ರತ ದಾಸ್ ಮಾತನಾಡಿ, ಡೇಟಾ ಸೈನ್ಸ್, ಮಷಿನ್ ಲರ್ನಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕ್ರಾಂತಿಯಾಗುತ್ತಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕಾದುದು ಇಂದಿನ ಅಗತ್ಯತೆಯಾಗಿದೆ. ಮೂಲಸೌಕರ್ಯ ಹಾಗೂ ಸಂಶೋಧನಾ ಸಾಮರ್ಥ್ಯಗಳನ್ನು ನೂತನ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ವಿಸ್ತರಿಸಲು ಐಐಐಟಿ-ಬಿ ಮುಂದಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿ.ಟೆಕ್. ಪ್ರೋಗ್ರಾಂ ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು.
ಶೈಕ್ಷಣಿಕ ವಿಭಾಗದ ಡೀನ್ ಪ್ರೊ. ಚಂದ್ರಶೇಖರ ರಾಮನಾಥನ್ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಕೌಶಲ ಅತ್ಯಗತ್ಯ. ಕೌಶಲವಿದ್ದಾಗ ಮಾತ್ರ ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಟಿಕೋತ್ಸವದಲ್ಲಿ ರಂಜನಿ ನಿರಂಜನ್ ಪಿಎಚ್.ಡಿ. ಪದವಿ ಪಡೆದುಕೊಂಡರು. ಅವರ ಪುತ್ರ ಎಸ್.ಎನ್. ರಾವ್ ಇಂಟಿಗ್ರೇಟೆಡ್ ಎಂ.ಟೆಕ್. ಪದವಿ ಸ್ವೀಕರಿಸಿರು. ಈ ಮೂಲಕ ತಾಯಿ&ಮಗ ಒಂದೇ ವೇದಿಕೆಯಲ್ಲಿ ಪದವಿ ಪಡೆದುಕೊಂಡ ಕ್ಷಣಕ್ಕೆ ಕಾರ್ಯಕ್ರಮ ಸಾಯಾಯಿತು. ವಿದ್ಯಾರ್ಥಿಗಳಾದ ಆರ್.ವಿನಯ್ (ಎಂ.ಟೆಕ್.), ಅಂಕಿತ್ ಅಗರ್ವಾಲ್ (ಐ&ಎಂ.ಟೆಕ್.), ಕೊಗತಂ ಭಾರತ್ (ಎಂಎಸ್ಸಿ ಡಿಜಿಟಲ್ ಸೊಸೈಟಿ) ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.