ಜಿಲ್ಲೆ

ಸಂದಿವಾತ ನಿರ್ಲಕ್ಷಿಸಿದರೆ ಅಪಾಯ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಸಂದಿವಾತವು ಮಹಿಳೆಯರು ಮಕ್ಕಳು ಸೇರಿ ಎಲ್ಲ ವಯೋಮಾನದವರನ್ನು ಕಾಡುವ ಕಾಯಿಲೆಯಾಗಿದ್ದು, ಇದನ್ನು ನಿರ್ಲಕ್ಷಿಸಿದರೆ ಅಪಾಯ. ಆದರೆ ಚಿಕಿತ್ಸೆಯೊಂದೇ ಪರಿಹಾರ ಎಂದು ಡಾ. ಬಿ.ಡಿ ಜತ್ತಿ ಹೋಮಿಯೋಪಥಿ ಕಾಲೇಜಿನ ಪ್ರಾಧ್ಯಾಪಕ ಡಾ. ಮಹಾದೇವ ಹಳ್ಳಿಕೇರಿ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಹೋಮಿಯೋಪಥಿ ವೈದ್ಯ ಡಾ. ಎಚ್​.ಎಚ್​. ಸಿನ್ನೂರ ದತ್ತಿ ನಿಮಿತ್ತ ಇತ್ತೀಚೆಗೆ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂದಿವಾತ ಹಾಗೂ ಹೋಮಿಯೋಪಥಿ ಪರಿಹಾರ ಕುರಿತು ಅವರು ಮಾತನಾಡಿದರು.

ಸಂದಿವಾತದಲ್ಲಿ ಪ್ರಕಾರಗಳು ಅನೇಕ. ಆದರೆ ಗೌಟ್​ ಸಂದಿವಾತ ಅಧಿಕ ನೋವು ಹಾಗೂ ಉರಿಯೂತ ಉಂಟು ಮಾಡುವುದಾಗಿದೆ. ತಂಪು ವಾತಾವರಣ ನೋವು, ಉರಿಯೂತ ಹೆಚ್ಚಾಗಲು ಕಾರಣ. ಸಾಮಾನ್ಯವಾಗಿ ಹೋಮಿಯೋಪಥಿ ಸೇರಿ ಎಲ್ಲ ವೈದ್ಯ ಪದ್ಧತಿಯಲ್ಲಿ ಇದಕ್ಕೆ ಚಿಕಿತ್ಸೆ ಇದೆ. ಸಂದಿವಾತ ಕಾಣಿಸಿಕೊಂಡಲ್ಲಿ ಸ್ವಯಂ ಚಿಕಿತ್ಸೆ ಅನುಸರಿಸದೇ ವೈದ್ಯರ ಸಲಹೆ ಪಡೆಯಬೇಕು. ಸ್ವಯಂ ಔಷಧ ಕೆಲವು ಸಲ ಅಡ್ಡ ಪರಿಣಾಮ ಬೀರಬಹುದು ಎಂದರು.

ಡಾ. ಆನಂದ ಪಾಂಡುರಂಗಿ ಮಾತನಾಡಿ, ಸಿನ್ನೂರ ಹೋಮಿಯೋಪಥಿಯ ಮಹಾನ್​ ಸಾಧಕರು. 60 ವರ್ಷದ ಅವರ ನಿಸ್ವಾರ್ಥ ಸೇವೆ ಅನುರಕರಣೀಯ. ಈ ಭಾಗದಲ್ಲಿ ಹೋಮಿಯೋಪಥಿ ಚಿಕಿತ್ಸೆ ಜನಪ್ರಿಯಗೊಳಿಸಿದವರಾಗಿದ್ದಾರೆ. ವೈದ್ಯರು ತಮ್ಮ ವೃತ್ತಿ ಜತೆಗೆ ಇತರ ವೈದ್ಯ ಪದ್ಧತಿ ಗೌರವಿಸಬೇಕು ಎಂದರು.

ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಕಾರ್ಯಕರ್ತ ಮಹಾಂತಯ್ಯ ಮಠಪತಿ ಅವರನ್ನು ಸನ್ಮಾನಿಸಲಾಯಿತು. ದತ್ತಿದಾನಿ ಡಾ. ಪಾರ್ವತಿ ಹಾಲಭಾವಿ ಬರೆದ ಚಿಂತನ-ಮಂಥನ ಕೃತಿ ಬಿಡುಗಡೆ ಮಾಡಲಾಯಿತು.

ಸುರೇಶ ಹಾಲಭಾವಿ, ಬಸವಪ್ರಭು ಹೊಸಕೇರಿ, ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಪಿ.ಎಚ್​. ನೀರಲಕೇರಿ, ಎಸ್​.ಜಿ. ಪಾಟೀಲ, ನಿಂಗಣ್ಣ ಕುಂಟಿ, ಬಸವರಾಜ ಲೋಕೂರ, ಎಂ.ಎಸ್​. ನರೇಗಲ್​, ಸವಿತಾ ಮಠಪತಿ, ಅನ್ನಪೂರ್ಣ ಲೋಕೂರ, ಅಶೋಕ ಚಿಕ್ಕೋಡಿ, ನೀಲಕ್ಕಾ ಬೆಲ್ಲದ, ಇತರರು ಇದ್ದರು.

ಡಾ. ಧನವಂತ ಹಾಜವಗೋಳ ಸ್ವಾಗತಿಸಿದರು. ಶಂಕರ ಕುಂಬಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹೇಶ ಹೊರಕೇರಿ ನಿರೂಪಿಸಿದರು. ವೀರಣ್ಣ ಒಡ್ಡೀನ ವಂದಿಸಿದರು.