ಬಾಳೆಹೊನ್ನೂರು ಸಮೀಪದ ಮಸೀದಿಕೆರೆಯ ಆಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಪವಿತ್ರ ರಂಜಾನ್ ಮಾಸದ ಅಂಗವಾಗಿ ಇಫ್ತಾರ್ ಸಂಗಮ ಕಾರ್ಯಕ್ರಮ ಆಯೋಜಿಸಲಾಗಿತ್ತು.  
ಜಿಲ್ಲೆ

ಮಸೀದಿಕೆರೆಯಲ್ಲಿ ಇಫ್ತಾರ್ ಸಂಗಮ

Shivamogga - Desk - Vinayakumar D B

ಬಾಳೆಹೊನ್ನೂರು: ಸಮೀಪದ ಮಸೀದಿಕೆರೆಯ ಆಲ್ ಬದ್ರಿಯಾ ಜುಮ್ಮಾ ಮಸೀದಿಯಲ್ಲಿ ಪವಿತ್ರ ರಂಜಾನ್ ಮಾಸದ ಅಂಗವಾಗಿ ಭಾನುವಾರ ಇಫ್ತಾರ್ ಸಂಗಮ ಆಯೋಜಿಸಲಾಗಿತ್ತು.

ಬಿ.ಕಣಬೂರು ಗ್ರಾಮ ಪಂಚಾಯಿತಿ ಸದಸ್ಯ ಇಬ್ರಾಹಿಂ ಶಾಫಿ, ಗುತ್ತಿಗೆದಾರ ಟಿ.ಎಂ.ಬಶೀರ್ ಇಂಪಾಲ್ ನೇತೃತ್ವದಲ್ಲಿ ಇಫ್ತಾರ್ ಸಂಗಮ ಏರ್ಪಡಿಸಲಾಗಿತ್ತು. ಭಾಗವಹಿಸಿದ್ದ ಪ್ರತಿಯೊಬ್ಬರಿಗೂ ವಿವಿಧ ಹಣ್ಣು, ಪಾನೀಯಗಳನ್ನು ನೀಡಿ ಸತ್ಕರಿಸಲಾಯಿತು.
ಖತೀಬ್ ಉಸ್ತಾದ್ ಜುಬೈರ್ ಪಾಳಿಲಿ ಕಾಮಿಲ್ ಸಖಾಫಿ, ಮಸೀದಿ ಕಾರ್ಯದರ್ಶಿ ತೌಸಿಫ್, ಸಿ.ಎ.ಲತೀಫ್, ಹೋಬಳಿ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಹನೀಫ್, ಟಿ.ಟಿ.ಇಸ್ಮಾಯಿಲ್, ಶಾಹಿದ್ ಮತ್ತಿತರರು ಹಾಜರಿದ್ದರು.