ನೇಸರಗಿ: ಮಹಾತ್ಮರ ಅನುಭವದ ನುಡಿಗಳನ್ನು ಕೇಳಿದರೆ ಜೀವನ ಪಾವನವಾಗುತ್ತದೆ ಎಂದು ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಡಂಬಳ-ಗದಗ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.
ಸಮೀಪದ ನಾಗನೂರ ಗ್ರಾಮದಲ್ಲಿ ಸಿದ್ಧರಾಮೇಶ್ವರ ಜಾತ್ರಾ ಮಹೋತ್ಸವ ಹಾಗೂ ಕಾಯಕಯೋಗಿ ಡಾ.ಶಿವಬಸವ ಸ್ವಾಮೀಜಿ 30ನೇ ಪುಣ್ಯಸ್ಮರಣೆ, ಶ್ರಾವಣ ಮಾಸದ ಪ್ರಯುಕ್ತ ಈಚೆಗೆ ಏರ್ಪಡಿದ್ದ ಜೀವನ ದರ್ಶನ ಪ್ರವಚನ ಮಂಗಲ ಕಾರ್ಯಕ್ರಮದಲ್ಲಿ ಮಾತನಾಡಿದರು.
ಭಗವಂತನನ್ನು ಆರಾಧಿಸುವವರಿಗೆ ಆತನ ಕೃಪೆ ದೊರೆಯುತ್ತದೆ. ಪ್ರಾಮಾಣಿಕವಾಗಿ ದುಡಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂದರು. ಡಾ.ಅಲ್ಲಮಪ್ರಭು ಸ್ವಾಮೀಜಿ, ಡಾ.ಮಹಾಂತ ಪ್ರಭು ಸ್ವಾಮೀಜಿ, ಬಸವಲಿಂಗ ಸ್ವಾಮೀಜಿ, ಮಲ್ಲಿಕಾರ್ಜುನ ದೇವರು, ಶಿವಶರಣ ದೇವರು, ಶಿವಮೂರ್ತಿ ಸ್ವಾಮೀಜಿ, ಶಿವಯೋಗಿ ದೇವರು, ಶಿವಬಸವ ದೇವರು, ವೀರಸಿದ್ಧ ದೇವರು, ಕಿತ್ತೂರ ಶಾಸಕ ಬಾಬಾಸಾಹೇಬ ಪಾಟೀಲ, ಕೆಪಿಸಿಸಿ ಸದಸ್ಯೆ ರೋಹಿಣಿ ಬಾಬಾಸಾಹೇಬ ಪಾಟೀಲ ಇತರರಿದ್ದರು.