ಅರಟಾಳ: ಎಲ್ಲರೂ ಕೂಡಿ ಬಾಳುವಂತೆ ಕೈ ಹಿಡಿದು ನಡೆಸಿದ ಸದ್ಗುರು ಮಾಧವಾನಂದ ಪ್ರಭೂಜಿ ಅವರ ಮಾರ್ಗದಲ್ಲಿ ಪಾದಯಾತ್ರೆ ನಡೆದುಕೊಂಡು ಬಂದಿದೆ. ಸದ್ಗುರುವಿನ ಮೇಲೆ ನಂಬಿಕೆ ಇಟ್ಟು ನಡೆದರೆ ಜೀವನ ಪಾವನವಾಗುತ್ತದೆ ಎಂದು ಇಂಚಗೇರಿ ಮಠದ ಸುಭಾಸ ಮಹಾರಾಜರು ಹೇಳಿದರು.
ಗ್ರಾಮಕ್ಕೆ ಶುಕ್ರವಾರ ಆಗಮಿಸಿದ ಮಾಧವಾನಂದ ಪ್ರಭೂಜಿ ಮಾಧವ ರಥೋತ್ಸವ ಮತ್ತು ಭಾವೈಕ್ಯ ಸರ್ವಧರ್ಮ ಸತ್ಸಂಗ ಪಾದಯಾತ್ರೆ ಉದ್ದೇಶಿಸಿ ಮಾತನಾಡಿ, ಶ್ರೀ ಸದ್ಗುರು ರೇವಣ್ಣಸಿದ್ಧೇಶ್ವರ ಮಹಾರಾಜರ ಆದೇಶದಂತೆ ಪ್ರತಿ ಹಳ್ಳಿಹಳ್ಳಿಗೂ ಪಾದಯಾತ್ರೆ ಮೂಲಕ ಸನ್ಮಾರ್ಗದ ತತ್ತ್ವ ಸಾರುತ್ತ ನ.2ರಂದು ಇಂಚಗೇರಿಮಠದಲ್ಲಿ ನಡೆಯುವ ಮಾಧವಾನಂದ ಪ್ರಭೂಜಿಯವರ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುತ್ತದೆ ಎಂದರು.
ಭೀಮಣ್ಣ ಮಹಾರಾಜರು ಮಾತನಾಡಿದರು. ಕಾಡಪ್ಪ ಮಹಾರಾಜರು, ಮಹೇಶ ಮಹಾರಾಜರು, ಭೀಮಣ್ಣ ಮಹಾರಾಜರು, ಸದಾಶಿವ ರಡೆರಟ್ಟಿ, ಹನುಮಂತ ಮಾಡಗ್ಯಾಳ, ಶಿವಲಿಂಗಪ್ಪ ಜಂಬಗಿ, ದುರ್ಗಪ್ಪ ವಡ್ಡರ, ಎಸ್.ಎಸ್.ಮಾಳಿ, ಮಾಧವಾನಂದ ಮಾಳಿ, ಸದಾನಂದ ಮಾಡಗ್ಯಾಳ, ಅಶೋಕ ಮಾಳಿ, ಗಿರಮಲ್ಲ ಮಾಳಿ, ಮಲ್ಲಿಕಾರ್ಜುನ ಮಾಳಿ ಇತರರಿದ್ದರು.