ಜಿಲ್ಲೆ

ಖಾತೆಗೆ ಕ್ಯಾತೆ ತೆಗೆದರೆ ತಕ್ಕ ಶಾಸ್ತಿ

ಶಾಸಕ ಕೆಎಚ್‌ಪಿ ಎಚ್ಚರಿಕೆ | ಸಾರ್ವಜನಿಕರಿಗೆ ಖಾತೆ ವಿತರಣೆ

ಗೌರಿಬಿದನೂರು: ಖಾತೆ ವಿಚಾರದಲ್ಲಿ ನಗರಸಭೆಯಲ್ಲಿ ಯಾರಾದರೂ ಕ್ಯಾತೆ ತೆಗೆದರೆ ಗಮನಕ್ಕೆ ತನ್ನಿ. ತಕ್ಷಣ ಕ್ರಮ ಕೈಗೊಳ್ಳುವ ಎಂದು ಶಾಸಕ ಕೆ.ಎಚ್. ಪುಟ್ಟಸ್ವಾಮಿಗೌಡ ತಿಳಿಸಿದರು.

ನಗರಸಭೆ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಖಾತೆ ಅದಾಲತ್‌ನಲ್ಲಿ ಸಾರ್ವಜನಿಕರಿಗೆ ಖಾತೆ ವಿತರಿಸಿ ಮಾತನಾಡಿ, ನಗರಸಭೆ ಕಂದಾಯ ವಿಭಾಗದ ಬಗ್ಗೆ ಹಿಂದಿನಿಂದಲೂ ಸಾಕಷ್ಟು ದೂರುಗಳಿದ್ದವು. ಅದನ್ನು ಸರಿಪಡಿಸುವ ಉದ್ದೇಶದಿಂದ ಪಾರದರ್ಶಕ ಆಡಳಿತಕ್ಕೆ ಒತ್ತು ನೀಡಲು ಈವರೆಗೆ 3491 ಖಾತೆಗಳನ್ನು ನೀಡಲಾಗಿದೆ. ಇಂದು 140 ಮಂದಿಗೆ ವಿತರಿಸಲಾಗಿದೆ ಎಂದರು.

ಉಪಾಧ್ಯಕ್ಷ ಫರೀದ್, ಸದಸ್ಯರಾದ ಡಿ.ಜೆ.ಚಂದ್ರಮೋಹನ್, ಪದ್ಮಾವತಮ್ಮ, ಗಿರೀಶ್, ಜಯರಾಮಯ್ಯ, ಪೌರಾಯುಕ್ತೆ ಡಿ.ಎಂ.ಗೀತಾ, ಮುಖಂಡರಾದ ಅಬೂಬಕರ್, ಲಕ್ಷ್ಮೀ, ಅಸ್ಲಂ, ಖಲಂದರ್ ಹಾಗೂ ಕಂದಾಯ ವಿಭಾಗದ ಸಿಬ್ಬಂದಿ ಇದ್ದರು.