ಜಿಲ್ಲೆ

ಹಾಡಿರೆ ರಾಗಗಳ - ತೂಗಿರೆ ದೀಪಗಳ ಕಾರ್ಯಕ್ರಮ ಮೋಡಿ

ಮೈಸೂರು: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಕಲಾಮಂದಿರದಲ್ಲಿ ಆಯೋಜಿಸಿದ್ದ ‘ಹಾಡಿರೆ ರಾಗಗಳ - ತೂಗಿರೆ ದೀಪಗಳ’ ಕಾರ್ಯಕ್ರಮದಲ್ಲಿ ಹಲವು ಕಲಾ ತಂಡದಿಂದ ಜಾನಪದ ಗೀತೆ, ಭಕ್ತಿಗೀತೆ, ಭಾವಗೀತೆಗಳ ಗಾಯನ ಮೋಡಿ ಮಾಡಿತು.

ಕಲಾ ಪ್ರಕಾರ ಅಮ್ಮ ರಾಮಚಂದ್ರ ತಂಡದಿಂದ ಸುಗಮ ಸಂಗೀತ , ಪದ್ಮ ಮತ್ತು ತಂಡದಿಂದ ಜಾನಪದ ಗೀತೆ, ಸಿಂಚನ ಮತ್ತು ತಂಡದಿಂದ ಭಾವಗೀತೆ, ಜಿ.ಎಸ್.ಮೋಹನ್ ಮತ್ತು ತಂಡದಿಂದ ಬೀಸು ಕಂಸಾಳೆ, ಪುಟ್ಟ ಮಹದೇವಪ್ಪ ತಂಡದಿಂದ ಭಕ್ತಿ ಸಂಗೀತ, ತಾಯಮ್ಮ , ಚಿಕ್ಕತಾಯಮ್ಮ ಹಾಗೂ ಚಿಕ್ಕಮಂಚಮ್ಮ ತಂಡದಿಂದ ಸೋಬಾನೆ ಪದ, ಪುನೀತ್‌ಕುಮಾರ್ ತಂಡದಿಂದ ಡೊಳ್ಳು ಕುಣಿತ ಯಶಸ್ವಿಯಾಗಿ ಮೂಡಿಬಂದಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ ಸುದರ್ಶನ್ ಅವರು ಕಲಾತಂಡದವರಿಗೆ ಪ್ರಮಾಣ ಪತ್ರ ವಿತರಣೆ ಮಾಡಿ ಗೌರವಿಸಿದರು.