If you serve with devotion, you will attain all wealth. 
ಜಿಲ್ಲೆ

ಭಕ್ತಿಯಿಂದ ಸೇವೆ ಮಾಡಿದರೆ ಸರ್ವ ಸಂಪತ್ತು ಪ್ರಾಪ್ತಿ

Vijayapura - Desk - Doddanagouda Gudihindin

ಕಮತಗಿ: ಭಕ್ತಿಯಿಂದ ಸೇವೆ ಮಾಡಿದರೆ ಭಗವಂತ ಸರ್ವ ಸಂಪತ್ತನ್ನು ನೀಡುತ್ತಾನೆ ಎಂದು ಕಮತಗಿಯ ಹೊಳೆ ಹುಚ್ಚೇಶ್ವರ ಸ್ವಾಮೀಜಿ ಹೇಳಿದರು.

ಶ್ರೀಶೈಲ ಪಾದಯಾತ್ರಿಗಳಿಗೆ ಪಟ್ಟಣದ ಹೊರವಲಯದಲ್ಲಿರುವ ವೀರೇಶ್ವರ ಮಠದಲ್ಲಿ ಶುಕ್ರವಾರ ಕಮತಗಿ ಸದ್ಭಕ್ತ ಮಂಡಳಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಭಕ್ತಿಯಿಂದ, ನಿಸ್ವಾರ್ಥ ಸೇವೆ ಮಾಡಿದರೆ ದೇವರ ಅನುಗ್ರಹ ಸಿಗುತ್ತದೆ. ಇಂತಹ ಸೇವಾ ಕಾರ್ಯಗಳು ಸಮಾಜದಲ್ಲಿ ಸದ್ಗುಣಗಳನ್ನು ತರುತ್ತವೆ. ಕಮತಗಿ ಹಾಗೂ ಸುತ್ತಮುತ್ತಲಿನ ಹಳ್ಳಿಗಳ ಸರ್ವ ಸದ್ಭಕ್ತ ಮಂಡಳಿ 24 ವರ್ಷಗಳಿಂದ ನಿರಂತರವಾಗಿ ಅನ್ನದಾಸೋಹ ಕಾರ್ಯಕ್ರಮ ಆಯೋಜಿಸುತ್ತಿರುವುದು ಶ್ಲಾಘನೀಯ ಎಂದರು.

ಗುಳೇಗುಡ್ಡದ ಮರಡಿ ಮಠದ ಅಭಿನವ ಕಾಡ ಸಿದ್ಧೇಶ್ವರ ಸ್ವಾಮೀಜಿ ಇದ್ದರು.