ಜಿಲ್ಲೆ

ಪ್ರವಚನ ಆಲಿಸಿದರೆ ಜೀವನ ಪಾವನ

ಕೋ.ಶಿವಾಪುರ: ಪ್ರವಚನ ಆಲಿಸಿದರೆ ಮನುಷ್ಯನ ಜೀವನ ಪಾವನವಾಗುತ್ತದೆ. ಸಂತರು&ಶರಣರ ನುಡಿಗಳಲ್ಲಿ ಅವರ  ಅನುಭವದ ಅಮೃತವಿದೆ ಎಂದು ಹುಬ್ಬಳ್ಳಿ ಮೂರು ಸಾವಿರ ಮಠದ ಗುರುಸಿದ್ದ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಗ್ರಾಮದಲ್ಲಿ ಹಿರೇಮಠ ಆವರಣದಲ್ಲಿ ಚರಂತಯ್ಯ ದೇವರ ಪಟ್ಟಾಧಿಕಾರದ ಅಂಗವಾಗಿ ಈಚೆಗೆ ತಿಂಗಳ ನಿರಂತರ ಪ್ರವಚನ ಕಾರ್ಯಕ್ರಮ ಉಧ್ಘಾಟಿಸಿ

ಮಾತನಾಡಿದರು. ಪಂಚಾಚಾರ್ಯರ ಧ್ವಜಾರೋಹಣ ನೆರವೇರಿಸಲಾಯಿತು.

ಗ್ರಾಪಂ ಅಧ್ಯ ತವನಪ್ಪ ಟೋಪಣ್ಣವರ ಅಧ್ಯತೆ ವಹಿಸಿದ್ದರು. ಮುನವಳ್ಳಿ ಮುರುಂದ್ರ ಸ್ವಾಮೀಜಿ, ಭಾಗೋಜಿಕೊಪ್ಪ ಮುರುರಾಜೇಂದ್ರ ಶಿವಾಚಾರ್ಯರು, ಹರ್ಲಾಪೂರ&ಬಿಜಗುಪ್ಪಿ ಶಿವಯೋಗಿ ಶಿವಾಚಾರ್ಯರು, ರೇವಣಸಿದಟಛಿ ಶಿವಾಚಾರ್ಯರು, ಚಂದ್ರಶೇಖರ ಶಿವಾಚಾರ್ಯರು, ಮಹೇಶ್ವರ ಶಿವಾಚಾರ್ಯರು, ಪ್ರವಚನಕಾರ ಅಂತೂರ &ಬೆಂತೂರ ಮಠದ ಕುಮಾರದೇವರು, ಮಲ್ಲಿಕಾರ್ಜುನ ಗವಾಯಿಗಳು ಹೂಗಾರ, ಸುಭಾಷಚಂದ್ರ ಹೊಸಮನಿ, ಹಿರೇನಂದಿ ಸೌಭಾಗ್ಯಲಕ್ಷಿ$್ಮ ಶುಗರ್ಸ್​ ಅಧ್ಯಕ್ಷ ಸಂತೋಷ ಜಾರಕಿಹೊಳಿ, ಕಡಬಿ ಗ್ರಾಪಂ ಅಧ್ಯ ಪ್ರಕಾಶ ಸುಣಧೋಳಿ ಮತ್ತು ಮಾಡಮಗೇರಿ ಗ್ರಾಪಂ ಅಧ್ಯ ಲಕ್ಕಪ್ಪ ಸಣ್ಣಲಿಂಗನ್ನವರ,

ಬಸಯ್ಯ ಹಿರೇಮಠ, ಮಹಾದೇವ ಗಡ್ಡಿ ಇತರರಿದ್ದರು.