ಜಿಲ್ಲೆ

ಛಲ ಇದ್ದರೆ ಸಾಧಕರಾಗಿ ಹೊರಹೊಮ್ಮಲು ಸಾಧ್ಯ

ಕೋಟ: ಕ್ರೀಡಾ ಕ್ಷೇತ್ರದಲ್ಲಿ ಪ್ರತಿಯೊಬ್ಬರೂ ಸಾಧನೆ ಪಥದೊಂದಿಗೆ ಸಚಿನ್ ತೆಂಡೂಲ್ಕರ್, ಅನಿಲ್ ಕುಂಬ್ಳೆ ಅವರಂತೆ ಪ್ರಸಿದ್ಧಿ ಪಡೆಯಿರಿ. ಶೈಕ್ಷಣಿಕ ಸಾಧಕರೇ ಕ್ರೀಡಾಪಟುಗಳಾಗಬೇಕೆಂದಿಲ ಬದಲಾಗಿ ಸಾಧನೆ ತೊರುವ ಛಲ ಇದ್ದರೆ ಸಾಧಕನಾಗಿ ಹೊರಹೊಮ್ಮಲು ಸಾಧ್ಯ ಎಂದು ಜಪಾನ್ ಮಿಯಾಜಾಕಿ ವಿಶ್ವವಿದ್ಯಾಲಯ ಪ್ರೊಫೆಸರ್ ಹರೀಶ್‌ಕುವಾರ್ ಮಧ್ಯಸ್ಥ ಕರೆ ನೀಡಿದರು.

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಹಂಗಾರಕಟ್ಟೆಯ ಚೇತನಾ ಪ್ರೌಢಶಾಲೆಯ ಬಿ.ಡಿ ಶೆಟ್ಟಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ತಾಲೂಕುಮಟ್ಟದ ಕ್ರಿಕೆಟ್ ಪಂದ್ಯಾಕೂಟದಲ್ಲಿ ಮಾತನಾಡಿದರು.

ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್ ಉದ್ಘಾಟಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಭರತ್‌ಕುವಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಎಚ್.ಇಬ್ರಾಹಿಂ ಸಾಹೇಬ್, ಫಾರ್ಚುನ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸ್ ಮುಖ್ಯಸ್ಥ ತಾರನಾಥ ಶೆಟ್ಟಿ, ಐರೋಡಿ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಶೆಟ್ಟಿ, ಹಂಗಾರಕಟ್ಟೆ ರೋಟರಿ ಕ್ಲಬ್ ಅಧ್ಯಕ್ಷೆ ಜ್ಯೋತಿ ಉದಯ್ ಕುವಾರ್, ಶಾಲಾ ಆಡಳಿತ ಮಂಡಳಿ ಜತೆ ಕಾರ್ಯದರ್ಶಿ ವ್ನಿೇಶ್ವರ ಅಡಿಗ, ಉಡುಪಿ ಜಿಲ್ಲಾ ದೈಹಿಕ ಶಿಕ್ಷಕರ ಸಂ ಅಧ್ಯಕ್ಷ ವಿಜಯ ಕುವಾರ್ ಶೆಟ್ಟಿ, ದೈಹಿಕ ಶಿಕ್ಷಕರ ಸಂ ಬ್ರಹ್ಮಾವರ ತಾಲೂಕು ಗ್ರೇಡ್ 1ರ ಅಧ್ಯಕ್ಷ ಚಂದ್ರಶೇಖರ್, ದೈಹಿಕ ಶಿಕ್ಷಕರ ಸಂದ ಗ್ರೇಡ್ 2 ಇದರ ಅಧ್ಯಕ್ಷ ಶ್ರೀಕಾಂತ್ ಸಾವಂತ್ ಉಪಸ್ಥಿತರಿದ್ದರು.

ಬ್ರಹ್ಮಾವರ ವಲಯ ದೈಹಿಕ ಶಿಕ್ಷಣ ಪರಿವೀಕ್ಷಕ ನಿತ್ಯಾನಂದ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯಶಿಕ್ಷಕಿ ಕಲ್ಪನಾ ಶೆಟ್ಟಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಹರ್ಷವರ್ಧನ್ ಶೆಟ್ಟಿ ನಿರೂಪಿಸಿದರು.