ಹಗರಿಬೊಮ್ಮನಹಳ್ಳಿಯಲ್ಲಿ ಒಳ ಮೀಸಲಾತಿ ಹೋರಾಟ ಕ್ರಾಂತಿಕಾರಿ ರಥಯಾತ್ರೆಯಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ದೊಡ್ಡಬಸಪ್ಪ ಮಾತನಾಡಿದರು. ಹೋರಾಟಗಾರ ಬಿ.ಆರ್.ಭಾಸ್ಕರ ಪ್ರಸಾದ, ಅಂಬೇಡ್ಕರ್ ಸೇನೆ ಜಿಲ್ಲಾ ಸಂಚಾಲಕ ಮಂಜುನಾಥ ಬ್ಯಾಲಾಳ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಕಹಳೆ ಬಸವರಾಜ ಇತರರಿದ್ದರು. 
ಜಿಲ್ಲೆ

ಒಳಮೀಸಲಾತಿ ನೀಡದಿದ್ದರೆ ಕುರ್ಚಿ ಬಿಡಿ

ಹಗರಿಬೊಮ್ಮನಹಳ್ಳಿ: ಒಳ ಮೀಸಲಾತಿಗಾಗಿ 30 ವರ್ಷಗಳಿಂದ ಹೋರಾಟ ಮಾಡಲಾಗುತ್ತಿದೆ. ಆದರೆ, ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ. ಒಳಮೀಸಲಾತಿ ನೀಡಿ ಇಲ್ಲವೆ ಕುರ್ಚಿಬಿಡಿ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸಂಘದ ತಾಲೂಕು ಅಧ್ಯಕ್ಷ ಗದ್ದಿಕೆರೆ ಎಚ್.ದೊಡ್ಡಬಸಪ್ಪ ಹೇಳಿದರು.

ಒಳಮೀಸಲಾತಿ ಹೋರಾಟ ಕ್ರಾಂತಿಕಾರಿ ರಥಯಾತ್ರೆ ಮಂಗಳವಾರ ಪಟ್ಟಣಕ್ಕೆ ಆಗಮಿಸಿದಾಗ ಮಾತನಾಡಿದರು. ಹೋರಾಟದ ನೇತೃತ್ವ ವಹಿಸಿರುವ ಬೆಂಗಳೂರಿನ ಬಿ.ಆರ್.ಭಾಸ್ಕರ ಪ್ರಸಾದ ಮಾತನಾಡಿ, ಹೋರಾಟ ಜನಾಂದೋಲನ ಆಗುತ್ತಿದೆ. ಒಳಮೀಸಲಾತಿ ಜಾರಿಗೊಳಿಸಿದ ಬಳಿಕವೇ ಬಡ್ತಿ ನೀಡಬೇಕು ಹಾಗೂ ನೇಮಕ ಪ್ರಕ್ರಿಯೆ ನಡೆಸಬೇಕು ಎಂದು ಒತ್ತಾಯಿಸಿದರು.

ಅಂಬೇಡ್ಕರ್ ಸೇನೆ ಜಿಲ್ಲಾ ಸಂಚಾಲಕ ಮಂಜುನಾಥ ಬ್ಯಾಲಾಳ, ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಕಹಳೆ ಬಸವರಾಜ, ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಎಚ್.ಪ್ರಭಾಕರ, ಪ್ರಮುಖರಾದ ಮರಿಯಪ್ಪ, ಎಚ್.ಲೋಕಪ್ಪ, ಮೈಲಪ್ಪ, ಕೊಟ್ರೇಶ, ಎಚ್.ನಿಂಗಪ್ಪ, ನಾಗರಾಜ, ಅರ್ಜುನ, ಮಾದೂರು ಮಹೇಶ, ಬಿ.ಜಿ.ಹಳ್ಳಿ ಮಹೇಶ, ಎಂ.ರಮೇಶ, ಮೇಘರಾಜ, ವಿ.ಶಿವಕುಮಾರ, ಬಿ.ಪ್ರಕಾಶ, ಪುಜಾರ ಸಿದ್ದಪ್ಪ, ಎಂ.ಪ್ರಕಾಶ, ಯಮನಪ್ಪ ಇತರರಿದ್ದರು.