ಹೊಳೆಹೊನ್ನೂರು: ಶ್ರೀಕೃಷ್ಣ ಅವತರಿಸಿದ್ದು ಸಜ್ಜನರ ಉದ್ಧಾರಕ್ಕಾಗಿ. ಇಂತಹ ಕೃಷ್ಣ ಜನ್ಮಾಷ್ಟಮಿ ವ್ರತ ಆಚರಿಸಿದರೆ ಅಶ್ವಮೇಧಯಾಗದ -Àಲವಿದೆ ಎಂದು ಉತ್ತರಾದಿ ಮಠದ ಶ್ರೀಸತ್ಯಾತ್ಮ ತೀರ್ಥ ಶ್ರೀಪಾದರು ಹೇಳಿದರು.
ಬುಧವಾರ 28ನೇ ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಅನುಗ್ರಹ ಸಂದೇಶ ನೀಡುತ್ತಾ, ಸಂಸಾರದಲ್ಲಿ ಅನೇಕ ವಿಧದ ಆಂತರಿಕ, ಬಾಹ್ಯ ಶತ್ರುಗಳನ್ನು ಗೆಲ್ಲಲು ಶ್ರೀ ಕೃಷ್ಣ ಜನ್ಮಾಷ್ಟಮಿ ವ್ರತವನ್ನು ಭಕ್ತಿಯಿಂದ ಮಾಡಬೇಕು. ದೇವರ ಧ್ಯಾನ, ಚಿಂತನ, ಉಪವಾಸ ಆಚರಿಸಬೇಕು. ಆಗ ಸಂಸಾರದಲ್ಲಿ ಜಯ ಲಭಿಸುತ್ತದೆ. ಅಲ್ಲದೆ ಅe್ಞÁನದಿಂದ ಮಾಡಿದ ಪಾಪಗಳೂ ನಾಶವಾಗುತ್ತದೆ ಎಂದರು.
ಬಿದರಹಳ್ಳಿ ಶ್ರೀಕರಾಚಾರ್ಯ ಪ್ರವಚನ ನೀಡಿ, ಚಾತುರ್ಮಾಸ್ಯಕ್ಕೆ ಬಂದರೆ ಕಾಶಿ ಮೊದಲಾದ ಕ್ಷೇತ್ರಗಳಿಗೆ ಹೋಗಿಬಂದ ಪುಣ್ಯ ಲಭಿಸುತ್ತದೆ. ಅನೇಕ ಶಾಸö, ಗ್ರಂಥಗಳ ಶ್ರವಣವಾಗುತ್ತದೆ. ಇಲ್ಲಿ ಬಂದವರು ಸದಾಕಾಲ ಭಕ್ತಿಯಿಂದ ದೇವರನ್ನು ಸ್ಮರಿಸಬೇಕು. ಯಾವಾಗಲೂ ಸಂಸಾರದಲ್ಲಿ ಮಗ್ನರಾಗಿರದೆ ಈ ಜನ್ಮ ಬಂದಿದ್ದು ಹೇಗೆ? ಮುಂದಿನ ಗತಿ ಏನು? ಉತ್ತಮ ಗತಿಗೆ ಯಾವ ಮಾರ್ಗ ಅನುಸರಿಸಬೇಕು. ಈ ಬಗ್ಗೆ ಚಿಂತನೆ ನಡೆಸಬೇಕು. ಆಗ ಮಾತ್ರ ಸದ್ಗತಿ ಸಾಧ್ಯ ಎಂದರು.
ಪAಡಿತ ಕ¯್ಲÁಪುರ ಪವಮಾನಾಚಾರ್ಯ, ಚಾತುರ್ಮಾಸ್ಯ ಸಮಿತಿಯ ಅಧ್ಯಕ್ಷ ನವರತ್ನ ಸುಬ್ಬಣ್ಣಾಚಾರ್ಯ, ಪಂಡಿತರಾದ ನವರತ್ನ ಶ್ರೀನಿವಾಸಾಚಾರ್ಯ, ನವರತ್ನ ಪುರುಷೋತ್ತಮಾಚಾರ್ಯ, ರಘೂತ್ತಮಾಚಾರ್ಯ ಸಂಡೂರು, ವಾದಿರಾಜ ಅಗ್ನಿಹೋತ್ರಿ, ಮಧುಸೂಧನ ನಾಡಿಗ್, ಸಿ.ಪಿ.ವಾದಿರಾಜ, ಗುರುರಾಜ ಕಟ್ಟಿ, ರಾಮಧ್ಯಾನಿ ಅನಿಲï ಮೊದಲಾದವರಿದ್ದರು.
ಕೃಷ್ಣನಿಗೆ ಪ್ರಸಾದ
ಶ್ರೀಕೃಷ್ಣ ಜನ್ಮಾಷ್ಟಮಿಯ ನಿಮಿತ್ತ ಬುಧವಾರ ತಡರಾತ್ರಿ ಚಂದ್ರೋದಯದ ಬಳಿಕ ಶ್ರೀಸತ್ಯಾತ್ಮ ತೀರ್ಥರು ಕೃಷ್ಣನಿಗೆ ಪ್ರಸಾದ ಪ್ರದಾನ ಮಾಡಿದರು. ವಿಶೇಷ ಭಕ್ಷ್ಯಗಳು, ನಾನಾ ರೀತಿಯ -Àಲಗಳನ್ನು ದೇವರಿಗೆ ಅರ್ಪಿಸಿದರು. ಬುಧವಾರ ಇಡೀ ದಿನ ಉಪವಾಸವಿದ್ದ ಶ್ರೀಗಳು ಗುರುವಾರ ಸಂಜೆ ಸಂಸ್ಥಾನ ಪೂಜೆ ನೆರವೇರಿಸಿದರು. ರೋಹಿಣಿ ನಕ್ಷತ್ರ ಮತ್ತು ಅಷ್ಟಮಿ ತಿಥಿಯ ಬಳಿಕ ಸಂಜೆ ದೇವರಿಗೆ ನೈವೇದ್ಯಾದಿಗಳನ್ನು ನೆರವೇರಿಸಿ ನಂತರ ಭಿಕ್ಷಾ ಸ್ವೀಕರಿಸಿದರು.