???????????? 
ಜಿಲ್ಲೆ

ಸಂತರ ಸನ್ಮಾರ್ಗದಲ್ಲಿ ನಡೆದರೆ ಜೀವನ ಪಾವನ

ಬೈಲಹೊಂಗಲ: ಪ್ರತಿಯೊಬ್ಬರು ಸೂಫಿ-ಸಂತರು, ಶರಣರು ಹಾಕಿದ ಸನ್ಮಾರ್ಗದಲ್ಲಿ ನಡೆದಾಗ ಮಾತ್ರ ಜೀವನ ಪಾವನವಾಗುತ್ತದೆ ಎಂದು ಮುಸ್ಲಿಂ ಸಮುದಾಯದ ಮುಖಂಡ ರಫೀಕ್ ಬಡೇಘರ್ ಹೇಳಿದರು. ಪಟ್ಟಣದ ಅಹಲೆ ಸುನ್ನತುಲ್ ಜಮಾತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಹಜರತ್ ಹಾಫೀಜ್ ಬರಿ ಷಾವಲಿ ದರ್ಗಾದ ಸಂದಲ್ ಮತ್ತು ಉರುಸ್ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉರುಸ್ ನಿಮಿತ್ತ ಗಂಧ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಕೀರರ ಪವಾಡಗಳು ಮೂಕವಿಸ್ಮಿತ ರನ್ನಾಗಿಸಿದವು. ಮುಸ್ಲಿಂ ಧರ್ಮ ಗುರು ಹಾಫೀಜ್ ಮಹ್ಮದಲಿ ಮಲ್ಲಿಕ್, ಇಲಿಯಾಸ್ ಪೀರ ಹುಬ್ಬಳ್ಳಿ, ಗೌಸ್ ಪೀರ, ಗಣ್ಯರಾದ ನಿಜಾಂ ಗುರ್ಲಹೊಸೂರ, ದಿಲಾವರ ಧೂಪದಾಳ ಅವರನ್ನು ಸನ್ಮಾನಿಸಲಾಯಿತು.

ಅಹಲೆ ಸುನ್ನತುಲ್ ಜಮಾತದ ಅಧ್ಯಕ್ಷ ಲತೀಪೀರ ತೊಲಗಿ, ಸದಸ್ಯರಾದ ಇಸ್ಮಾಯಿಲ್ ಬಡೇಘರ್, ಸುಬಾನಿ ಸೈಯ್ಯದ್, ಇಕ್ಬಾಲ್ ಜಮಾದಾರ, ಇರ್ಫಾನ್ ಬಾಟಲಿವಾಲೆ, ಗೌಸ್ ಪೀರ ಮುಲ್ಲಾ, ನ್ಯಾಯಮತಲಿ ಮಕನಾದರ, ರಾಜು ಹುಬ್ಬಳ್ಳಿ, ರ್ಇಾನ್ ತಿಗಡಿ, ಶೌಕತ್ ಹುಬ್ಬಳ್ಳಿ, ಶಕೀಲ್ ಪೀರಜಾದೆ, ಮೆತಾಬ್ ಖುದ್ದುನ್ನವರ, ಅಬ್ಬಾಸ್ ಬಾಗೇವಾಡಿ, ಜಾರ್ ಕೌಜಲಗಿ ಇತರರಿದ್ದರು.