ಬೆಂಗಳೂರು: ಸೋಶಿಯಲ್ ಮೀಡಯಾ ಚಟ ಎಷ್ಟರ ಮಟ್ಟಿಗೆ ಇದೆ ಅಂದ್ರೆ.. ನಾವು ಟ್ರೆಂಟ್ನಲ್ಲಿ ಒಬ್ಬರಾಗಿರ ಬೇಕು ಎನಾದ್ರು ಒಂದು ವಿಚಾರವಾಗಿ ಸುದ್ದಿಯಲ್ಲಿರಬೇಕು ಎಂದು ಸೋಶಿಯಲ್ ಪ್ರಿಯರು ಆಸೆ ಪಡುತ್ತಾರೆ. ಇದಕ್ಕೆ ಪೂರಕವಾಗಿರುವುದು ರೀಲ್ಸ್ ಮಾಡುವ ಖಯಾಲಿ. ಇಂದಿನ ಯುವಪಿಳಿಗೆಗೆ ರೀಲ್ಸ್ ಮಾಡು ಚಟ ಹೆಚ್ಚಾಗಿದೆ. ಯಾವುದೇ ವಯಸ್ಸಿನ ಅಂತರ ಇಲ್ಲದೆ ರೀಲ್ಸ್ ಮಾಡುತ್ತಾರೆ. ಆದರೆ ಈ ಗಿಳಿನಿಂದ ಎಷ್ಟೋ ಅಪಘಾತ, ಅವಘಡ, ಸಮಸ್ಯೆಗಳು ಉಂಟಾಗಿವೆ. ಆದರೆ ಜನರಿಗೆ ಮಾತ್ರ ಕ್ರೇಜ್ ಕಡಿಮೆ ಆಗಿಲ್ಲ. ಹೀಗೆ ಇಲ್ಲೊಬ್ಬ ರೀಲ್ಸ್ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾನೆ.
ಬಂಡೆಪಾಳ್ಯದ ಗೆದ್ದನಹಳ್ಳಿಯ ನಿವಾಸಿಯಾಗಿರುವ ಯೂಟ್ಯೂಬರ್ ಸಂತೋಷ್ ಕುಮಾರ್ ಡಿಸೆಂಬರ್ 24 ರಂದು ಮೆಟ್ರೋ ಚಲಿಸುತ್ತಿದ್ದಾಗ ರೀಲ್ಸ್ ಮಾಡ್ತಾ ಸಹ ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದರು. ಮೆಟ್ರೋ ರೈಲಿನಲ್ಲಿ ಹುಚ್ಚಾಟ ಮೆರೆದಿದ್ದರು. ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ನಲ್ಲಿ ಯಶ್ ಗೌಡ ಎಂಬ ಅಕೌಂಟ್ ಮೂಲಕ ರೀಲ್ಸ್ ಅಪ್ಲೋಡ್ ಮಾಡಲಾಗಿತ್ತು.
ಈ ವಿಡಿಯೋವನ್ನ ಆಧರಿಸಿ ಸಂತೋಷ್ ಕುಮಾರ್ ಗೆ ದಂಡ ವಿಧಿಸಲಾಗಿದೆ. ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆಸಿ, ವಿಚಾರಣೆ ನಡೆಸಿ ನಮ್ಮ ಮೆಟ್ರೋ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ನಮ್ಮ ಮೆಟ್ರೋದಲ್ಲಿ ನ್ಯೂಸ್ಸೆನ್ಸ್ ಉಂಟುಮಾಡಿದ ಆರೋಪದಡಿ ಯೂಟ್ಯೂಬರ್ ಸಂತೋಷ್ ಕುಮಾರ್ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು 500 ರೂ. ದಂಡವಿಧಿಸಿ ಎಚ್ಚರಿಕೆ ನೀಡಲಾಗಿದೆ. ಭದ್ರತಾ ವಿಭಾಗದ ಅಧಿಕಾರಿಗಳು ನಮ್ಮ ಮೆಟ್ರೋದಲ್ಲಿ ರೀಲ್ಸ್ ಮಾಡಿ ಹುಚ್ಚಾಟ ನಡೆಸಿದ್ದವನನ್ನ ಪತ್ತೆ ಹಚ್ಚಿ ದಂಡ ವಸೂಲಿ ಮಾಡಿದ್ದಾರೆ.