ಜಿಲ್ಲೆ

ಒಗ್ಗಟ್ಟಿನಿಂದಿದ್ದರೆ ಯಾರೂ ಏನೂ ಮಾಡಲಾಗದು

ವಿನಯ ಹೆಗಡೆ

ಭಟ್ಕಳ: ರತ್ನಾಕರ ಸಮುದ್ರ ಹರಿದು ಬಂದ ಹಾಗೆ ಭಟ್ಕಳ ಹಿಂದು ಸಮಾಜ ಒಂದಾಗಿ ಬಂದಿರುವದನ್ನು ನೋಡಿದರೆ ಇದೊಂದು ಸ್ಪಷ್ಟ ಸಂದೇಶ ಬಾಂಗ್ಲಾ ದೇಶಕ್ಕೆ ತಲುಪಲಿದೆ ಎಂದು ಗುರುಪುರ ಮಂಗಳೂರಿನ ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದ ಸ್ವಾಮೀಜಿಗಳು ನುಡಿದರು.

ಅವರು ಶುಕ್ರವಾರ ವಿಶ್ವ ಹಿಂದೂ ಪರಿಷತ್ ಮತ್ತು ಹಿಂದೂ ಜಾಗರಣ ವೇದಿಕೆ, ಭಟ್ಕಳದ ಸಮಸ್ತ ಹಿಂದೂ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆದ ಬ್ರಹತ್ ಪ್ರತಿಬಟನಾ ಮೆರವಣಿಗೆಯ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಸೀನಾ ಬೆಗಮ್ ಭಾರತಕ್ಕೆ ಬಂದ ಕೂಡಲೆ ಯೂನುಸ್ ಎನ್ನುವ ಅಸಮರ್ಥ ನಾಯಕ ಬಾಂಗ್ಲಾ ದೇಶದ ಚುಕ್ಕಾಣಿ ಹಿಡಿದ. ಬಾಂಗ್ಲಾ ದೇಶದಲ್ಲಿ ಅಲ್ಪಸಂಖ್ಯಾತ ಹಿಂದುಗಳನ್ನು ರಕ್ಷಿಸುವ ಕಾರ್ಯ ಮಾಡಬೇಕಿದ್ದ ಆತ ಕೋಮು ದ್ವೇಷಕ್ಕೆ ಪ್ರಚೋದನೆ ನೀಡಿ ನರಮೇಧಕ್ಕೆ ಚಾಲನೆ ನೀಡಿದ್ದಾನೆ. ಜಗತ್ತಿನಾದ್ಯಂತ ಶಾಂತಿ ಮಂತ್ರವನ್ನು ಪಠಿಸುವ ಇಸ್ಕಾನ್ ಸಂಸ್ಥೆ ್ಬಾಂಗ್ಲಾದಲ್ಲೂ ಕಾರ್ಯ ನಡೆಸುತ್ತಿದೆ. ಜಾತಿ, ಮತ, ಪಂಥ ಬೇದವನ್ನು ಮರೆತು ಎಲ್ಲರಿಗೂ ಅನ್ನ ನೀಡಿದ ಸಂಸ್ಥೆಯ ಚಿನ್ಮಯಿ ಕೃಷ್ಣದಾಸನನ್ನು ಬಂಧಿಸಿದ್ದಾರೆ. ಬಾಂಗ್ಲಾದಲ್ಲಿ ಹಿಂದು ಹೆಣ್ಣು ಮಕ್ಕಳ ಅತ್ಯಾಚಾರ ದೌರ್ಜನ್ಯ ಮೀತಿ ಮೀರುತ್ತಿದೆ. ಕೋಮು ಪ್ರಚೋದನೆ ನೀಡಿ ದೌರ್ಜನ್ಯ ಎಸಗುವ ನಿಮಗೆ ಸಧ್ಯದಲ್ಲೇ ಒಂದು ಗತಿ ಕಾದಿದೆ ಎಂದು ಎಚ್ಚರಿಸಿದರು.

ಹಿಂದುಗಳು ಅಲ್ಪಸಂಖ್ಯಾತರಾದ ಕಡೆಯೆಲ್ಲಾ ಇಂತಹುದೆ ಸಮಸ್ಯೆಗಳು ನಿರ್ವಣವಾಗುತ್ತಿವೆ. ನಾಳೆ ಭಟ್ಕಳದಲ್ಲೂ ಹಿಂದುಗಳು ಎಚ್ಚರಿಕೆಯಿಂದು ಇರಬೇಕು. ಸಂಘಟನೆ, ಸಂಪತ್ತು ಸಂತಾನವನ್ನು ಕಾಯ್ದುಕೊಳ್ಳಿ, ನಮ್ಮ ಮಕ್ಕಳಿಗೆ ಸಂಸ್ಕಾರ ಕೊಡುವಂತ ಅತಿ ಮುಖ್ಯವಾದ ಸನ್ನಿವೇಶ ಇಂದು ನಿರ್ವಣವಾಗಿದೆ ಎಂದರು.

ಇಂದು ವಕ್ಪ್ ಎನ್ನುವದು ವಕ್ಕರಿಸಿಕೊಂಡು ಬರುತ್ತಿದೆ. ಅದರ ಕುರಿತು ಯಾರು ಮಾತನಾಡುತ್ತಿಲ್ಲ. ಇಲ್ಲಿ ನಮ್ಮ ನೆಲೆಯೇ ಭದ್ರವಿಲ್ಲ. ಆದರೆ ಭಾರತದಲ್ಲಿ ಸಮರ್ಥ ಪ್ರಧಾನಿ ಇರುವುದರಿಂದ ನಮಗೆ ಭಯವಿಲ್ಲ ಎಂದು ಅವರು ಹೇಳಿದರು.

ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತದ ಪ್ರಮುಖ ಕಾರ್ಕಳದ ಶ್ರೀಕಾಂತ ಶೆಟ್ಟಿ ಮಾತನಾಡಿ, ಕೇಸರಿ ಹಾರಾಡುತ್ತಿರುವದು ಗಾಳಿಯಿಂದ ಅಂತ ತಿಳಿದುಕೊಂಡರೆ ಅದು ನಮ್ಮ ತಪ್ಪು ಕಲ್ಪನೆ. ಸಹಸ್ರಾರು ಹಿಂದೂ ಕಾರ್ಯಕರ್ತರು ಬಲಿದಾನದ ಸಂರ್ದಬದಲ್ಲಿ ಅವರ ಚೆಲ್ಲಿದ ನೆತ್ತರಿನಿಂದ ಇದು ಹಾರಾಡುತ್ತಿದೆ ಎಂದರು.

ಹಿಂದೂ ಮುಖಂಡ ಗೋವಿಂದ ಖಾರ್ವಿ, ವಿಶ್ವ ಹಿಂದೂ ಪರಿಷತ್ ಭಟ್ಕಳದ ಅಧ್ಯಕ್ಷ ರಾಮಕೃಷ್ಣ ನಾಯ್ಕ, ಕಾರ್ಯಕ್ರಮದ ಸಹಸಂಚಾಲಕ ಜಯಂತ ಬೆಣಂದೂರು, ನಾಗೇಶ ನಾಯ್ಕ ಹೆಬಳೆ ಮಾತನಾಡಿದರು. ದಿವ್ಯಾ ದಿನೇಶ ನಾಯ್ಕ, ಉಮೇಶ ಮುಂಡಳ್ಳಿ, ಪ್ರಾರ್ಥಿಸಿದರೆ ಶಿಕ್ಷಕ ನಾರಾಯಣ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಮಾಜಿ ಸಚಿವ ಶಿವಾನಂದ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, 31 ಸಮಾಜದ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.