ಸಾಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸಮ್ಮೇಳನಲ್ಲಿ ಪರ್ವೀಜ್ ಷರೀಫ್ ಮಾತನಾಡಿದರು. ಬುರ್‌ಹಾನ್ ಅಹ್ಮದ್ ಸಾಬ್, ತಾಹೀರ್ ಷರೀಫ್ ಇತರರಿದ್ದರು.  
ಜಿಲ್ಲೆ

ಯುವಜನರು ಸನ್ಮಾರ್ಗದಲ್ಲಿ ನಡೆದರೆ ದೇಶ ಸಮೃದ್ಧ

ಸಾಗರ: ದೇಶದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಅಮೂಲ್ಯ. ಯುವಜನರು ದೇಶಾಭಿಮಾನ ಬೆಳೆಸಿಕೊಳ್ಳುವ ಜತೆಗೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಹ್ಮದೀಯ ಮುಸ್ಲಿಂ ಸಂಘಟನೆಯ ಮಾಧ್ಯಮ ಸಂಚಾಲಕ ಪರ್ವೀಜ್ ಷರೀಫ್ ಹೇಳಿದರು.\

ಶಿವಪ್ಪ ನಾಯಕ ನಗರದಲ್ಲಿರುವ ಅಹ್ಮದೀಯ ಮುಸ್ಲಿಂ ಜಮಾತ್‌ನಲ್ಲಿ ಮಜ್ಲಿಸೆ ಖುದ್ದಾಮುಲ್ಲಾ ಅಹ್ಮದೀಯ ಮತ್ತು ಅತ್ಫಾಮಲ್ ಅಹ್ಮದೀಯದಿಂದ ಹಮ್ಮಿಕೊಳ್ಳಲಾಗಿದ್ದ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿ, ಇಂತಹ ಸಮಾವೇಶದ ಮೂಲಕ ಯುವಜನರನ್ನು ಸನ್ಮಾರ್ಗದಲ್ಲಿ ಕರೆದೊಯ್ಯುವ ಕೆಲಸವನ್ನು ಮಾಡಲಾಗುವುದು. ಅಹ್ಮದೀಯ ಮುಸ್ಲಿಂ ಜಮಾತ್ ಜಗತ್ತಿನ ಶಾಂತಿಗಾಗಿ ಅವಿರತವಾಗಿ ಕೆಲಸ ಮಾಡುತ್ತಿದೆ. ಯುವಜನರು ಸನ್ಮಾರ್ಗದಲ್ಲಿ ನಡೆದರೆ ದೇಶವು ಶಾಂತಿ ಮತ್ತು ಸಮೃದ್ಧವಾಗಿರುತ್ತದೆ ಎಂದರು.
ಧರ್ಮಗುರುಗಳಾದ ಬುರ್‌ಹಾನ್ ಅಹ್ಮದ್ ಸಾಬ್ ಮಾತನಾಡಿ, ಯುವಜನರು ಸುಧಾರಣೆ ಆಗದೇ ದೇಶವು ಅಭಿವೃದ್ಧಿ ಹೊಂದುವುದಿಲ್ಲ. ಹಜರತ್ ಮಿರ್ಜಾ ಬಸೀರುದ್ದೀನ್ ಮಹಮೂದ್ ಅಹ್ಮದ್ ಸಾಬ್ ಈ ಘಟಕವನ್ನು ಸ್ಥಾಪಿಸುವ ಮೂಲಕ ಯುವಜನರಲ್ಲಿ ರಾಷ್ಟಭಕ್ತಿ ಪ್ರೇರೇಪಿಸುವ ಕೆಲಸ ಮಾಡಿದ್ದರು ಎಂದು ತಿಳಿಸಿದರು.
ತಾಹೀರ್ ಷರೀಫ್, ಯೂಸೂಫ್ ಷರೀಫ್, ನದೀಮ್ ಅಹ್ಮದ್, ನಾಹೀದ್ ಅಹ್ಮದ್, ಕಲೀಂ ಅಹ್ಮದ್, ಇಮ್ತಿಯಾಜ್ ಅಹ್ಮದ್ ಇತರರಿದ್ದರು.