ಜಿಲ್ಲೆ

ಯುವ ಜನಾಂಗ ಒಗ್ಗಟ್ಟಾದರೆ ದೇಶಾಭಿವೃದ್ಧಿ

ಇಂದಿರಾ ಎನ್ ಕೆ

ಕುಂದಾಪುರ: ಕ್ರೀಡಾಟುಗಳು, ಕ್ರೀಡಾಭಿಮಾನಿಗಳನ್ನು ಒಂದುಗೂಡಿಸಿದರೆ ಸಮಾಜ ಒಗ್ಗಟ್ಟಾಗುತ್ತದೆ. ಯುವಸಮುದಾಯವನ್ನು ಒಗ್ಗೂಡಿಸಿದರೆ ದೇಶ ವೇಗವಾಗಿ ಅಭಿವೃದ್ಧಿಗೊಳ್ಳಲಿದೆ. ರಾಮಕ್ಷತ್ರಿಯ ಸಮಾಜ ಸಣ್ಣದಾಗಿದ್ದು, ಇನ್ನಷ್ಟೇ ಹೆಸರುವಾಸಿಯಾಗಬೇಕಿದೆ ಎಂದು ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್ ಹೇಳಿದರು.

ಕುಂದಾಪುರದ ಗಾಂಧಿ ಮೈದಾನದಲ್ಲಿ ರಾಮಕ್ಷತ್ರಿಯ ಯುವಕ ಮಂಡಳಿ ಆಶ್ರಯದಲ್ಲಿ ಯುವಕ ಮಂಡಲದ 60ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ರಾಮಕ್ಷತ್ರಿಯ ಸಮುದಾಯದವರಿಗೆ ಆಯೋಜಿಸಿದ್ದ ಅಂತಾರಾಜ್ಯ ಮಟ್ಟದ ರಾಮಕ್ಷತ್ರಿಯ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕುಂದಾಪುರ ರಾಮಕ್ಷತ್ರಿಯರ ಸಂಘ ಅಧ್ಯಕ್ಷ ಲಕ್ಷ್ಮೀಶ ಹವಲ್ದಾರ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ರಾಮಕ್ಷತ್ರಿಯ ಮಹಾಸಂಘ ಅಧ್ಯಕ್ಷ ಎಚ್.ಆರ್ ಶಶಿಧರ ನಾಯ್ಕ, ರಾಘವೇಂದ್ರ ಎಂ.ವಿ., ನಿವೃತ ಎಸಿಎಫ್‌ಒ ಮಂಜುನಾಥ ಎನ್., ಸೂರಜ್ ಮಂಗಳೂರು, ಸರೋಜ ಅರುಣ್ ಕುಮಾರ್, ಅನಿಲ್ ಕುಮಾರ್ ಯು.ಕೆ., ಗಣೇಶ್ ನಾಯಕ್, ಸುರೇಶ್ ಕೆಳಮನೆ, ಪ್ರಭಾಕರ ರಾವ್ ನೇರಂಬಳ್ಳಿ, ನಾಗರಾಜ ದಫೇದಾರ್, ರಾಮು ಹೆಗ್ಡೆ, ರವಿ ಹೆಗ್ಡೆ, ಅಮರ್ ಕುಮಾರ್, ಗಣೇಶ ಬೀರಿ ಉಪಸ್ಥಿತರಿದ್ದರು.

ಕ್ರೀಡಾ ಸಾಧಕರಾದ ನಾಗಶ್ರೀ ಉಪ್ಪಿನಕುದ್ರು, ಪೂರ್ವಿ ನಾಯಕ್, ಶಶಾಂಕ ಕೆ.ಸಿ, ಸುಪ್ರೀತಾ ಕ್ರೀಡಾ ಜ್ಯೋತಿ ತಂದರು. ರಾಮಕ್ಷತ್ರಿಯ ಯುವಕ ಮಂಡಳಿ ಅಧ್ಯಕ್ಷ ರಾಜೇಶ್ ಪಡುಕೇರಿ ಸ್ವಾಗತಿಸಿದರು. ಮಧುಕರ ಕೆ.ಕಾರ್ಯಕ್ರಮ ನಿರೂಪಿಸಿದರು.