ತುಮಕೂರು: ವೀರಶೈವ ಸವಾಜದಲ್ಲಿ ಒಗ್ಗಟ್ಟಿನ ಕೊರತೆಯಿದೆ, ಒಗ್ಗಟ್ಟಿನ ಬಲವಿದ್ದರೆ ಸವಾಜ ಇನ್ನೂ ಎತ್ತರಕ್ಕೆ ಬೆಳೆಯಬಹುದು ಆದರೆ, ಸವಾಜ ಎತ್ತ ಸಾಗಿದೆ? ಒಗ್ಗಟ್ಟಿನ ಮೂಲವೇ ಇಲ್ಲ ಎಂಬುದು ಇತ್ತೀಚೆಗೆ ನಡೆದ ಗ್ರಾಪಂ ಚುನಾವಣೆಯೇ ಸಾಕ್ಷಿ ಎಂದು ಸಂಸದ ಜಿ.ಎಸ್.ಬಸವರಾಜು ಬೇಸರ ವ್ಯಕ್ತಪಡಿಸಿದರು.
ನಗರದ ಜೆ.ಸಿ.ರಸ್ತೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ತಾಲೂಕು ವೀರಶೈವ ಲಿಂಗಾಯತ ನೌಕರರ ಕ್ಷೇವಾಭಿವೃದ್ಧಿ ಸಂದ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾ ವೀರಶೈವ ಲಿಂಗಾಯತ ನೌಕರರ ಸವಾವೇಶ ಮತ್ತು ಅಭಿನಂದನಾ ಸವಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ವಾತನಾಡಿದರು.
ಶೈಕ್ಷಣಿಕವಾಗಿ, ಆರ್ಥಿಕವಾಗಿ, ರಾಜಕೀಯದಲ್ಲೂ ಮುಂಚೂಣಿಯಲ್ಲಿರುವ ವೀರಶೈವ ಸವಾಜದಲ್ಲಿ ಹಿಂದುಳಿದಿರುವವರನ್ನು ಮೇಲೆತ್ತುವ ಕೆಲಸವಾಗಬೇಕು, ಅವರನ್ನೂ ಸಹ ಆರ್ಥಿಕವಾಗಿ, ಶೈಕ್ಷಣಿಕವಾಗಿ ಮುಂದೆ ತರಲು ಎಲ್ಲರೂ ಶ್ರಮಿಸಬೇಕು ಎಂದರು.
ಸಾವಾಜಿಕ ಪರಿವರ್ತನೆಗೆ ನಾವೆಲ್ಲ ಒಂದಾಗಬೇಕು ಎಂದು 12ನೇ ಶತವಾನದ ಹರಿಕಾರ ಬಸವಣ್ಣ ಹೇಳಿದ್ದರು, ಅವರ ಅನುಯಾಯಿಗಳಾಗಿ ನಾವು ಎಲ್ಲರೂ ಒಂದೇ ಎನ್ನುವ ಭಾವನೆ ರೂಢಿಸಿಕೊಂಡು ಒಗ್ಗಟ್ಟಿನಿಂದ ಮೀಸಲಾತಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್.ಪರಮಶಿವಯ್ಯ ವಾತನಾಡಿ, ಸಾವಾಜಿಕವಾಗಿ ವಂಚಿತರಾದ ವೀರಶೈವ ಸವಾಜದವರನ್ನು ಮೇಲೆತ್ತುವ ಜವಾಬ್ದಾರಿ ಮುಖ್ಯಮಂತ್ರಿಗಳು ಕೊಟ್ಟಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಹಾಗೂ ಶೈಕ್ಷಣಿಕವಾಗಿ ವಂಚಿತರಾದವರನ್ನು ಸವಾಜದ ಮುಖ್ಯವಾಹಿನಿಗೆ ತರಲು ಶ್ರಮಿಸುವುದಾಗಿ ತಿಳಿಸಿದರು.
ಸವಾಜಕ್ಕೆ ಅರ್ಜಿ ಹಾಕಿಕೊಂಡು ಯಾರೂ ಹುಟ್ಟಿಲ್ಲ, ಇದು ಆಕಸ್ಮಿಕ, ಆದ್ದರಿಂದ ಸಂಪ್ರದಾಯ, ಸಂಸ್ಕ್ಪ್ರತಿ, ಧರ್ಮ ಉಳಿಸಿಕೊಂಡು ಹೋಗುವುದು ಎಲ್ಲರ ಕರ್ತವ್ಯ. ವೀರಶೈವ ಸವಾಜ ಬಾಂಧವರು ನಿಷ್ಠೆಯಿಂದ ದಿನಕ್ಕೆ ಎರಡು ಬಾರಿ ಶಿವಪೂಜೆ ವಾಡಿ, ಒಳ್ಳೆಯದಾಗುತ್ತದೆ. ಜೀವನದಲ್ಲಿ ಹಿರಿಯರ ವಾರ್ಗದರ್ಶನ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿಗಣೇಶ್ ಉಪಸ್ಥಿತರಿದ್ದರು, ವಾಕನಹಳ್ಳಿ ಜಂಗಮ ಮಠದ ಶ್ರೀಗಂಗಾಧರ ಸ್ವಾಮೀಜಿ, ವೀರಶೈವ ಲಿಂಗಾಯತ ನೌಕರರ ಕ್ಷೇವಾಭಿವೃದ್ಧಿ ಸಂದ ಜಿಲ್ಲಾಧ್ಯಕ್ಷ ಎಂ.ಬಿ.ಶಿವಶಂಕರಪ್ಪ, ತಾಲೂಕು ಅಧ್ಯಕ್ಷ ಡಿ.ಎಸ್.ಪರಮಶಿವಯ್ಯ, ವೀರಶೈವ ಸವಾಜ ಸೇವಾ ಸಮಿತಿ ಅಧ್ಯಕ್ಷ ಟಿ.ಬಿ.ಶೇಖರ್, ಶ್ರೀ ಸಿದ್ಧಗಂಗಾ ಆಸ್ಪತ್ರೆ ಎಂಡಿ ಡಾ.ಪರಮೇಶ್ ವಾತನಾಡಿದರು, ಸಿದ್ಧಗಂಗಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಪಾದಪೂಜೆ ನೆರವೇರಿಸಲಾಯಿತು.
12ನೇ ಶತವಾನದಲ್ಲಿ ಬಸವಣ್ಣ ಸೇರಿದಂತೆ ಅನೇಕ ಶರಣ ಶರಣೆಯರು ಸವಾಜದ ಅಭಿವೃದ್ಧಿಗಾಗಿ ದೊಡ್ಡ ಕ್ರಾಂತಿಯನ್ನೇ ವಾಡಿದ್ದರು. ಇವರ ವಚನಗಳು ಇಂದಿಗೂ ಸವಾಜಕ್ಕೆ ಪ್ರಸ್ತುತವಾಗಿದ್ದು, ಪ್ರತಿಯೊಬ್ಬರೂ ಜಾತಿ ವ್ಯವಸ್ಥೆಯಿಂದ ಹೊರ ಬರುವ ಮೂಲಕ ಉತ್ತಮ ಸವಾಜ ನಿರ್ವಾಣ ವಾಡಲು ಸಾಧ್ಯ. ಶ್ರೀ ಸಿದ್ದಲಿಂಗ ಸ್ವಾಮೀಜಿ, ಸಿದ್ಧಗಂಗಾ ಮಠಾಧ್ಯಕ್ಷ