filter: 0; fileterIntensity: 0.0; filterMask: 0; hdrForward: 0; highlight: false; brp_mask:0; brp_del_th:null; brp_del_sen:null; delta:null; module: portrait;hw-remosaic: false;touch: (0.5231481, 0.30074993);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;HdrStatus: auto;albedo: ;confidence: ;motionLevel: -1;weatherinfo: null;temperature: 38; 
ಜಿಲ್ಲೆ

ರಸ್ತೆ ಗುಂಡಿ ಮುಚ್ಚದಿದ್ರೆ ಕಚೇರಿಗೆ ಬೀಗ!

ಬೆಳಗಾವಿ: ನಗರದ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಒಂದು ವಾರದೊಳಗೆ ಮುಚ್ಚಿ ದುರಸ್ತಿ ಮಾಡದಿದ್ದರೆ ಲೋಕೋಪಯೋಗಿ ಇಲಾಖೆ ಕಚೇರಿಗಳಿಗೆ ಬೀಗ ಹಾಕಿ ಅಧಿಕಾರಿಗಳ ವಿರುದ್ಧ ಕ್ರಿಮಿನಲ್​ ಕೇಸ್​ ದಾಖಲಿಸಿ.

ನಗರದ ಪಾಲಿಕೆ ಪರಿಷತ್​ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸದಸ್ಯರು ಈ ರೀತಿಯಾಗಿ ಆಕ್ರೋಶ ವ್ಯಕ್ತಪಡಿಸಿದರು.

ದಕ್ಷಿಣ ಮತ್ತು ಉತ್ತರ ವಿಧಾನಸಭಾ ಕ್ಷೇತ್ರಗಳಲ್ಲಿ ಮುಖ್ಯ ರಸ್ತೆ, ವಾರ್ಡ್​ಗಳಲ್ಲಿ ರಸ್ತೆಗಳೆಲ್ಲ ಸಂಪೂರ್ಣ ಹಾಳಾಗಿವೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಸಚಿವರು, ಗಣ್ಯರು ಓಡಾಡುವ ರಸ್ತೆಗಳನ್ನು ಮಾತ್ರ ದುರಸ್ತಿ ಮಾಡುತ್ತಿದ್ದಾರೆ. ಆದರೆ ಒಂದು ವರ್ಷದಿಂದ ರಸ್ತೆಗಳ ದುರಸ್ತಿ ನಡೆಯುತ್ತಿಲ್ಲ ಎಂದು ದೂರಿದರು.

ಶಾಸಕ ಅಭಯ ಪಾಟೀಲ ಮಾತನಾಡಿ, ರಸ್ತೆಗಳ ಗುಂಡಿ ಮುಚ್ಚಲು, ದುರಸ್ತಿ ಸೇರಿ ವಿವಿಧ ಕಾಮಗಾರಿ ಕೈಗೊಳ್ಳಲು ಪಾಲಿಕೆಯಿಂದ ಅನುದಾನ ಬಿಡುಗಡೆ ಮಾಡಲಾಗಿದೆ. ಆದರೆ, ಪಾಲಿಕೆ ಇಂಜಿನಿಯರ್​ಗಳು ಕಾಮಗಾರಿ ಕೈಗೊಳ್ಳುತ್ತಿಲ್ಲ. ಪರಿಣಾಮ ರಸ್ತೆ ಗುಂಡಿಗಳಲ್ಲಿ ಸವಾರರು ಬಿದ್ದು ಕೈ, ಕಾಲು ಮುರಿದುಕೊಳ್ಳುತ್ತಿದ್ದಾರೆ. ಕೆಲ ರಸ್ತೆಗಳಲ್ಲಿ ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ವಾರದೊಳಗೆ ರಸ್ತೆಗಳ ಗುಂಡಿಗಳನ್ನು ಮುಚ್ಚಬೇಕು ಎಂದು ಗಡುವು ನೀಡಿದರು.

ನಾಲ್ಕೆ$ದು ವರ್ಷಗಳಿಂದ ನಗರದಲ್ಲಿ ಎಲ್​ಆ್ಯಂಡ್​ಟಿ , ಮೆಗಾ ಗ್ಯಾಸ್​ ಕಂಪನಿಯವರು ಕಾಮಗಾರಿಗಳಿಗಾಗಿ ಪದೇ ಪದೆ ರಸ್ತೆ ಅಗೆಯುತ್ತಿದ್ದಾರೆ. ಆದರೂ ಕಾಮಗಾರಿ ಮುಗಿಯುತ್ತಿಲ್ಲ. ಇದರಿಂದ ಜನರು ರೋಸಿ ಹೋಗಿದ್ದಾರೆ. ವಾರದೊಳಗೆ ಕಾಮಗಾರಿ ಪೂರ್ಣಗೊಳಿಸಿ ರಸ್ತೆಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ ಸಾರ್ವಜನಿಕರು ಕಚೇರಿಗೆ ಮುತ್ತಿಗೆ ಹಾಕಿ ಬೀಗ ಹಾಕಲಿದ್ದಾರೆ. ಗಣೇಶ ಹಬ್ಬ ಮುಗಿಯುವರೆಗೆ ನಗರದಲ್ಲಿ ಯಾವುದೇ ದೊಡ್ಡ ಕಾಮಗಾರಿಗಳಿಗೆ ಅನುಮತಿ ನೀಡಬೇಡಿ ಎಂದು ಶಾಸಕರು ಆಗ್ರಹಿಸಿದರು. ಶಾಸಕ ಆಸ್​ೀ ಸೇಠ್​, ಮೇಯರ್​ ಮಂಗೇಶ ಪವಾರ್​, ಉಪಮೇಯರ್​ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹಣಮಂತ ಕೊಂಗಾಲಿ, ಸದಸ್ಯರು ಇತರರಿದ್ದರು.

ವೇಗಾ ಹೆಲ್ಮೆಟ್​ ಕಂಪನಿ ಕಟ್ಟಡ ಜಪ್ತಿ: ನಗರದ ಉದ್ಯಮಬಾಗದಲ್ಲಿನ ವೇಗಾ ಹೆಲ್ಮೆಟ್​ ಕಂಪನಿ ಪಾಲಿಕೆಗೆ 7,74,91,000 ರೂ. ತೆರಿಗೆ ವಂಚನೆ ಮಾಡಿರುವ ಕುರಿತು ಮೂರು ಬಾರಿ ನೋಟಿಸ್​ ಜಾರಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸದಿದ್ದರಿಂದ ಜೂ.18ರಂದು 24 ಗಂಟೆಯ ತುರ್ತು ನೋಟಿಸ್​ ಕೊಡಲಾಗುವುದು. ಇದಕ್ಕೂ ಸ್ಪಂದಿಸದಿದ್ದರೆ ಜೂ.19ರೊಳಗೆ ವೇಗಾ ಹೆಲ್ಮೇಟ್​ ಕಂಪನಿ ಕಟ್ಟಡ ಜಪ್ತಿ ಮಾಡಿಕೊಳ್ಳಲಾಗುವುದು ಎಂದು ಸದಸ್ಯರಿಗೆ ಪಾಲಿಕೆ ಕಂದಾಯ ಆಯುಕ್ತೆ ರೇಷ್ಮಾ ತಾಳಿಕೋಟಿ ಉತ್ತರಿಸಿದರು.

ಏಳು ಅಧಿಕಾರಿಗಳ ವಿರುದ್ಧ ಕೇಸ್​: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯ ಗೋಡ್ಸೆವಾಡಿಯಲ್ಲಿ ಸಿಂಗಲ್​ ಬಡಾವಣೆಗೆ 14 ಆಸ್ತಿ ಗುರುತಿನ ಸಂಖ್ಯೆ (ಪಿಐಡಿ) ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಕಂದಾಯ ವಿಭಾಗದ ಆಯುಕ್ತ ಸೇರಿ 7 ಜನ ಅಧಿಕಾರಿಗಳ ಮೇಲೆ ಎಫ್​ಐಆರ್​ ದಾಖಲಿಸಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದು, ತಪ್ಪಿತಸ್ಥ ಅಧಿಕಾರಿಗಳನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ತನಿಖಾ ವರದಿ ಸಲ್ಲಿಸಿದ ಬಳಿಕ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ಶುಭ ಬಿ. ತಿಳಿಸಿದರು.

ಕಾನೂನು ಅಧಿಕಾರಿ ವಿರುದ್ಧ ಆಕ್ರೋಶ: ನಗರದ ಟಿಳಕವಾಡಿಯ ಕ್ಲಬ್​ ಪ್ರಕರಣ, ಸರ್ಕಾರಿ ಆಸ್ತಿಗಳು ಖಾಸಗಿ ವ್ಯಕ್ತಿಗಳ ಪರಭಾರೆ ಸೇರಿ ವಿವಿಧ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಸಮರ್ಪಕ ದಾಖಲೆ ಸಲ್ಲಿಸುವಲ್ಲಿ ಪಾಲಿಕೆ ಕಾನೂನು ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ. ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದು, ಇವರ ನಡವಳಿಕೆಗಳು ಅನುಮಾನಕ್ಕೆ ಎಡೆ ಮಾಡಿಕೊಡುತ್ತಿವೆ. ಅಲ್ಲದೆ, ಪಾಲಿಕೆ ಪರ ಕೋರ್ಟ್​ನಲ್ಲಿ ವಿಚಾರಣೆಗೆ ಗೈರಾಗಿರುವುದಕ್ಕೆ ನ್ಯಾಯಾಲಯ 30 ಸಾವಿರ ರೂ. ದಂಡ ವಿಧಿಸಿದೆ. ಈ ಹಣವನ್ನು ಕಾನೂನು ಅಧಿಕಾರಿಯಿಂದಲೇ ಭರಿಸಬೇಕು. ಜತೆಗೆ ಹೊಸ ಕಾನೂನು ಅಧಿಕಾರಿ ನೇಮಿಸಲು ಶಾಸಕರು, ಸದಸ್ಯರು ಒತ್ತಾಯಿಸಿದರು.

ಕಟ್ಟಡಗಳ ಸೌಂದರ್ಯಕ್ಕೆ ಮರಗಳ ಕಟಾವು: ಬೆಳಗಾವಿ ನಗರದಲ್ಲಿ ಅಪಾಯಕಾರಿಯಾಗಿರುವ ಮರಗಳನ್ನು ಅರಣ್ಯ ಇಲಾಖೆ, ಪಾಲಿಕೆ ಪರಿಸರ ವಿಭಾಗದ ಅಧಿಕಾರಿಗಳು ಕಟಾವು ಮಾಡುತ್ತಿಲ್ಲ. ಆದರೆ, ಬಹುಮಹಡಿ, ವಾಣಿಜ್ಯ ಕಟ್ಟಡಗಳ ಸೌಂದರ್ಯಕ್ಕೆ ಅಡ್ಡಿಯಾಗಿರುವ ಮರಗಳು ಕಟಾವು ಮಾಡುತ್ತಿದ್ದಾರೆ. ವಿದ್ಯುತ್​ ತಂತಿಗಳು ಮೇಲೆ ಬಿದ್ದಿರುವ ಮರದ ಕೊಂಬೆಗಳನ್ನು ಎರಡು ವರ್ಷಗಳಿಂದ ತೆಗೆಯುತ್ತಿಲ್ಲ. ಅರಣ್ಯ ಇಲಾಖೆ ರ್ನಿಲಕ್ಷಕ್ಕೆ ಜನಸಾಮಾನ್ಯರು ಸಮಸ್ಯೆ ಎದುರಿಸುವಂತಾಗಿದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.