ಮಾಗಡಿ: ಮಾನವನ ಬಹುಮುಖ್ಯ ಅಂಗವಾದ ಹೃದಯದ ಬಡಿತ ನಿಂತರೆ ಉಸಿರೇ ನಿಂತಂತೆ. ಜೀವನವೇ ಅಂತ್ಯವಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರೂ 6 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವುದು ಅವಶ್ಯ ಎಂದು ನಾರಾಯಣ ಹೆಲ್ತ್ ಸಿಟಿಯ ಮ್ಯಾನೇಜರ್ ದೇವರಾಜ ನಾಯಕ್ ತಿಳಿಸಿದರು.
ಮಾಗಡಿ ಟೌನ್ನ ಕಲ್ಯಾಗೇಟ್ ಸರ್ಕಾರಿ ಶಾಲಾ ಆವರಣದಲ್ಲಿ ರೋಟರಿ ಮಾಗಡಿ ಸೆಂಟ್ರಲ್ ಹಾಗೂ ರೋಟರಿ ಬೆಂಗಳೂರು ವಿಜಯನಗರ ರೋಟರಿ ಕ್ಲಬ್ಗಳ ಸಂಯುಕ್ತಾಶ್ರಯದಲ್ಲಿ ನಾರಾಯಣ ಹೃದಯಾಲಯ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ್ದ ಹೃದಯ ಹಾಗೂ ಮಹಿಳೆಯರಿಗಾಗಿ ಸ್ತನ ಆರೋಗ್ಯ ಉಚಿತ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ರೋಟರಿ ಮಾಗಡಿ ಸೆಂಟ್ರಲ್ ಅಧ್ಯ ಡಾ. ಮಂಜುನಾಥ್ ಬೆಟಗೇರಿ ಮಾತನಾಡಿ, ಸಾಮಾನ್ಯವಾಗಿ ಇಸಿಜಿಗೆ 350 ರೂ. ಹಾಗೂ ಡಾಕ್ಟರ್ ಚಾರ್ರ್ಜ ಸೇರಿ 500 ರೂ. ವೆಚ್ಚವಾಗುತ್ತದೆ. ಆದರೆ ಈ ಶಿಬಿರದಲ್ಲಿ ಈ ಎಲ್ಲ ಸೇವೆಗಳನ್ನು ಉಚಿತವಾಗಿ ನೀಡುವ ಮೂಲಕ ರೋಟರಿ ಕ್ಲಬ್ ಜನಸೇವೆಗೆ ಕೈಜೋಡಿಸಿದೆ ಎಂದರು.
ರೋಟರಿ ಬೆಂಗಳೂರು ವಿಜಯನಗರ ಕ್ಲಬ್ ಅಧ್ಯ ಸುದರ್ಶನ ರೆಡ್ಡಿ ಮಾತನಾಡಿ, ಸ್ತನ ಕ್ಯಾನ್ಸರ್ ತಪಾಸಣೆಗೆ ಹೊರಗಿನ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಚ್ಚವಾಗುತ್ತದೆ. ಆದರೆ ನಮ್ಮ ರೋಟರಿ ಕ್ಲಬ್ ಈ ಸೇವೆಯನ್ನು ಮಾಗಡಿ ಪ್ರದೇಶದ ಜನತೆಗೆ ಉಚಿತವಾಗಿ ನೀಡಿದೆ ಎಂದು ತಿಳಿಸಿದರು.
ವಿಶ್ವಕುಮಾರ್, ಉಮೇಶ್, ರೂಪ್ಲಾಲ್, ದಣಮೂರ್ತಿ, ಗಣೇಶ್, ನಾಗರಾಜು.ಜಿ.ಸಿ., ಸುಲ್ತಾನ್ ಬಾಬಾ, ಡಾ. ಮಲ್ಲಿನಾಥ್, ಡಾ.ಲೋಕೇಶ್, ಚಿದಾನಂದ, ರುದ್ರಾರಾಧ್ಯ, ರಮೇಶ್, ಅಶ್ವಥ್, ನರಸಿಂಹಮೂರ್ತಿ ಇತರರು ಇದ್ದರು.
ಬೆಳಗ್ಗೆ 10 ರಿಂದ ಮಧ್ಯಾಹ್ನ 3ರ ವರೆಗೆ ಶಿಬಿರದಲ್ಲಿ ಸುಮಾರು 142 ಜನರು ಉಚಿತವಾಗಿ ತಪಾಸಣೆಗೆ ಒಳಪಟ್ಟರು.