ಸವಣೂರ: ತಾಲೂಕಿನ ಮಾದಾಪುರ ಗ್ರಾಮಕ್ಕೆ ಭೇಟಿ ನೀಡಿದ ಸಂಸದ ಬಸವರಾಜ ಬೊಮ್ಮಾಯಿ ಅವರು ಮತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ವೈಯಕ್ತಿಕ ಧನ ಸಹಾಯ ನೀಡಿದರು.
ಬಿದ್ದ ಮನೆಯನ್ನು ಪರಿಶೀಲಿಸಿ ದುರಂತಕ್ಕೆ ಕಾರಣವೇನು ಎಂಬುದರ ಮಾಹಿತಿ ಪಡೆದರು. ಮೃತಪಟ್ಟವರಿಗೆ ತಲಾ 50 ಸಾವಿರ ರೂ. ಹಾಗೂ ಗಾಯಾಳುಗಳಿಗೆ ಒಟ್ಟು 50 ಸಾವಿರ ರೂ. ನೆರವು ನೀಡಿದರು. ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಆಂಬುಲೆನ್ಸ್ ಬೇಗ ಬಂದಿದ್ದರೆ ಜೀವಗಳು ಉಳಿಯುತ್ತಿದ್ದವು. ತಡವಾಗಿ ಬಂದಿರುವುದು ಸಹ ಜೀವ ಹೋಗಲು ಕಾರಣ ಎಂದು ಸ್ಥಳಿಯರು ಹಾಗೂ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸರ್ಕಾರ ಯಾವುದೇ ಮುಂಜಾಗ್ರತೆ ಕ್ರಮ ಕೈಗೊಂಡಿಲ್ಲ. ನೆರೆ ಹಾಗೂ ಬರ ನಿಭಾಯಿಸುವಲ್ಲಿ ಸಂಪೂರ್ಣ ವಿಲವಾಗಿದೆ ಎಂದು ಆರೋಪಿಸಿದರು.
ನಂತರ ತಾಲೂಕು ಸಾರ್ವಜನಿಕ ಆಸ್ಪತ್ರೆಗೆ ತೆರಳಿ ಗಾಯಾಳು ಮುತ್ತಪ್ಪ ಹರಕುಣಿ, ಪತ್ನಿ ಸುನೀತಾ ಮುತ್ತಪ್ಪ ಹರಕುಣಿ ಅವರ ಆರೋಗ್ಯ ವಿಚಾರಿಸಿ, ಧೆರ್ಯ ತುಂಬಿದರು.