ಜಿಲ್ಲೆ

Warning: ಶಿರಸಿ ಕುಮಟಾ ರಸ್ತೆ ಬಂದ್‌ ಮಾಡಿದರೆ ಹೋರಾಟ

Uttara Kannada - Subash Hegde

ಕಾರವಾರ: ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರವನ್ನು ಮಾಡಿದರೆ ಹೋರಾಟ ಮಾಡುವುದಾಗಿ ಕರವೇ ಎಚ್ಯಾಚರಿಕೆ (Warning) ನೀಡಿದೆ. ಕರವೇ ಜಿಲ್ಲಾಧ್ಯಕ್ಷ ಭಾಸ್ಕರ ಪಟಗಾರ ಸುದ್ದಿಗೋಷ್ಠೀಯಲ್ಲಿ ಮಂಗಳವಾರ ಎಚ್ಚರಿಸಿದರು. ಶಿರಸಿ-ಕುಮಟಾ ನಡುವೆ ಸಾಕಷ್ಟು ಊರುಗಳಿವೆ. ಪ್ರತಿ ದಿನ ಓಡಾಡುವ ಸಾವಿರಾರು ಜನ ಇದ್ದಾರೆ. ಸೇತುವೆಗಳ ನಿರ್ಮಾಣಕ್ಕೆ ಎಂದು ರಸ್ತೆ ಬಂದ್ ಮಾಡಿದರೆ ಸಾರ್ವಜನಿಕರಿಗೆ ತೊಂದರೆಯಾಗಲಿದೆ ಎಂದರು.

ಏಕೆ Warning

ರಸ್ತೆ ವಿಸ್ತರಣೆ ಕಾಮಗಾರಿ ಕುಂಟುತ್ತ ಸಾಗಿದೆ. ಇದುವರೆಗೂ ಶೇ. 30 ರಷ್ಟು ರಸ್ತೆ ಕಾಮಗಾರಿಯೂ ಬಾಕಿ ಇದೆ. ವಾಹನ ಸಂಚಾರವನ್ನು ಒಮ್ಮೆ ಬಂದ್ ಮಾಡಿದರೆ ಇನ್ನು 3 ವರ್ಷ ವಾಹನ ಸಂಚಾರಕ್ಕೆ ಅವಕಾಶ ದೊರೆಯುವುದಿಲ್ಲ. 10 ಸೇತುವೆಗಳ ನಿರ್ಮಾಣ ಕಾಮಗಾರಿ ಬಾಕಿ ಇದ್ದು, ಅವುಗಳ ಪಕ್ಕದಲ್ಲಿ ಪರ್ಯಾಯ ರಸ್ತೆಯನ್ನು ಮಾಡಿಕೊಟ್ಟು ಸೇತುವೆಗಳನ್ನು ನಿರ್ಮಿಸಬಹುದು ಎಂದರು.

ಇನ್ನು ಶಿರಸಿ-ಹಾವೇರಿ-ಕುಮಟಾ ಹೆದ್ದಾರಿಯಲ್ಲಿ ಟೋಲ್ ಸಂಗ್ರಹಕ್ಕೂ ಸಿದ್ಧತೆ  ನಡೆದಿದ್ದು, ಅದನ್ನು ಯಾವುದೇ ಕಾರಣಕ್ಕೂ ಮಾಡಬಾರದು. ಮಾಡಿದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದರು. ನಾಗು ಹಳ್ಳೇರ, ರಾಜಾ ನಾಯ್ಕ, ಶಶಾಂಕ್‌ ಇತರರು ಇದ್ದರು.