ಜಿಲ್ಲೆ

ಗ್ರಾಮೀಣ ಮಕ್ಕಳು ಮುಂದುವರಿದರೆ ದೇಶದ ಅಭಿವೃದ್ಧಿ

ರೇಷ್ಮೆ ನಗರ ಡೆಸ್ಕ್

ಚನ್ನಪಟ್ಟಣ: ಗ್ರಾಮೀಣ ಮಕ್ಕಳು ಶೈಕ್ಷಣಿಕವಾಗಿ ಮುಂದುವರಿದರೆ ದೇಶ ಅಭಿವೃದ್ಧಿಯಾಗುತ್ತದೆ. ಆದರೆ, ಹಲವು ಕಾರಣಗಳಿಂದ ಶಿಣದಲ್ಲಿ ಹಿಂದುಳಿಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶೈಣಿಕ ಪ್ರಗತಿಗಾಗಿ ನಮ್ಮ ಸಮಾಜ ಶ್ರಮಿಸುತ್ತಿದೆ ಎಂದು ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜದ ಅಧ್ಯೆ ಎನ್​. ಶಾಂತಾ ರಾಮಸ್ವಾಮಿ ತಿಳಿಸಿದರು.

ತಾಲೂಕಿನ ಕೂಡ್ಲೂರು, ಚಕ್ಕೆರೆ, ಮಳೂರುಪಟ್ಟಣ, ಸುಳ್ಳೇರಿ, ಇಗ್ಗಲೂರು ಹಾಗೂ ಹಾರೋಕೊಪ್ಪ ಸರ್ಕಾರಿ ಪ್ರೌಢಶಾಲೆಯ ನೂರಾರು ವಿದ್ಯಾರ್ಥಿಗಳಿಗೆ ಉಚಿತವಾಗಿ ಬ್ಯಾಗ್​, ನೋಟ್​ ಬುಕ್​, ನೀರಿನ ಬಾಟಲ್​ ಹಾಗೂ ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಸಂಚಿಕೆ ವಿತರಿಸಿ ಮಾತನಾಡಿದರು.

ಹಲವು ಮಕ್ಕಳು ಪ್ರೋತ್ಸಾಹ ಕೊರತೆಯಿಂದ ಶೈಣಿಕವಾಗಿ ಹಿಂದುಳಿಯುತ್ತಿದ್ದಾರೆ. ಬಡ ಕುಟುಂಬದ ಮಕ್ಕಳು ದೊಡ್ಡ ದೊಡ್ಡ ಹುದ್ದೆ ಏರಬೇಕು. ಅದರಲ್ಲೂ ಹೆಣ್ಣು ಮಕ್ಕಳು ಉನ್ನತ ಸ್ಥಾನಕ್ಕೆ ಬರಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಉನ್ನತವಾದ ಕನಸು ಕಾಣಬೇಕು. ಓದುವ ಮಕ್ಕಳಿಗೆ ಪ್ರೋತ್ಸಾಹ ನೀಡಲು ನಾವು ಸಿದ್ಧವಿದ್ದೇವೆ ಎಂದರು.

ಪತ್ರಿಕೆಯ ಪ್ರಸರಣ ವಿಭಾಗದ ಮುಖ್ಯ ವ್ಯವಸ್ಥಾಪಕ ವಿದ್ಯಾಧರ ಪೂಜಾರ್​ ಮಾತನಾಡಿ, ಎಲೆಮರೆಕಾಯಿಯಂತೆ ಸಮಾಜಸೇವೆಗಳಲ್ಲಿ ತೊಡಗಿಸಿಕೊಂಡಿರುವ ಸಮಾಜ ಸೇವಕರೇ ನಿಜವಾದ ಆಸ್ತಿ. ಗ್ರಾಮೀಣ ವಿದ್ಯಾರ್ಥಿಗಳ ಶೈಣಿಕ ಪ್ರಗತಿಯ ಆಶಯವನ್ನಿಟ್ಟುಕೊಂಡು ಪ್ರಚಾರ ಹಾಗೂ ಸ್ವಾರ್ಥವಿಲ್ಲದೆ ಸೇವೆ ಮಾಡುತ್ತಿರುವ ಶಾಂತಾ ರಾಮಸ್ವಾಮಿ ಹಾಗೂ ಬಳಗದ ಕಾರ್ಯ ಶ್ಲಾನೀಯ ಎಂದರು.

ಕೂಡ್ಲೂರು ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕಿ ಯಶೋದಾ ಮಾತನಾಡಿ, ಮೊಬೈಲ್​ ಚಟದಿಂದ ಮಕ್ಕಳನ್ನು ದೂರವಿರಿಸಬೇಕಾದರೆ ಪತ್ರಿಕೆ ಓದುವ ಗೀಳನ್ನು ಹಂಚಬೇಕು. ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರ ಮಕ್ಕಳ ಶೈಣಿಕ ಪ್ರಗತಿಗೆ ರಹದಾರಿಯಂತಿದೆ ಎಂದರು.

ವಿಜಯವಾಣಿ ಪ್ರಸಾರಾಂಗ ವಿಭಾಗದ ಯತೀಂದ್ರ, ಮಹೇಶ್​, ವರದಿಗಾರ ಅಭಿಲಾಷ್​ ತಿಟ್ಟಮಾರನಹಳ್ಳಿ, ಶಿಣ ಸಂಯೋಜಕ ಯೋಗೇಶ್​ ಚಕ್ಕೆರೆ, ಇಗ್ಗಲೂರು ಪಿಎಸಿಎಸ್​ ಅಧ್ಯ ಡಿ.ಎಂ.ಕೆ.ಕುಮಾರ್​, ಎಲ್ಲ ಪ್ರೌಢಶಾಲೆಗಳ ಮುಖ್ಯ ಶಿಕರು, ಸಹ ಶಿಕರು, ಶಾಲಾ ಮಕ್ಕಳು ಇದ್ದರು.

ವಿಜಯವಾಣಿ ವಿದ್ಯಾರ್ಥಿ ಉದ್ಯೋಗ ಮಿತ್ರವನ್ನು ವಿದ್ಯಾರ್ಥಿಗಳಿಗೆ ಕೊಡುಗೆಯಾಗಿ ನೀಡುವ ಆಸಕ್ತಿ ಉಳ್ಳವರು ಮೊ.ನಂ. 8884432485 / 888443244 ಸಂಪರ್ಕಿಸಬಹುದು.

ಪುಸ್ತಕ ಯಾವತ್ತೂ ಯಾರನ್ನು ಕೆಡಿಸಿಲ್ಲ. ಪುಸ್ತಕ ಓದಿದರೆ ತಲೆ ಎತ್ತುವಂತೆ ಮಾಡುತ್ತದೆ. ಮೊಬೈಲ್​ ತಲೆತಗ್ಗಿಸುವಂತೆ ಮಾಡುತ್ತದೆ. ಕನಸು ಇಟ್ಟುಕೊಂಡವರು ಮಾತ್ರ ಸಾಧಿಸಲು ಸಾಧ್ಯ. ಮಕ್ಕಳು ಕನಸುಗಳ ಸಾಕಾರಕ್ಕೆ ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ. ಮುಂಬರುವ ಎಸ್​ಎಸ್​ಎಲ್​ಸಿ ಪರೀೆಯಲ್ಲಿ ಶೇ.90 ಅಂಕಗಳಿಸುವ, ಸರ್ಕಾರಿ ಶಾಲಾ ಮಕ್ಕಳಿಗೆ ಲ್ಯಾಪ್​ಟಾಟ್​ ಉಡುಗೊರೆ ನೀಡುತ್ತೇನೆ. > ಎನ್​. ಶಾಂತಾ ರಾಮಸ್ವಾಮಿ, ಬೆಂಗಳೂರಿನ ಬನಶಂಕರಿ ಮಹಿಳಾ ಸಮಾಜ ಅಧ್ಯೆ