ಜಿಲ್ಲೆ

ಒಗ್ಗೂಡದಿದ್ದರೆ ಮುದ್ರಣೋದ್ಯಮಕ್ಕೆ ಹಿನ್ನಡೆ

ಗದಗ: ಪ್ರಕಾಶಕರು ಮತ್ತು ಮುದ್ರಕರು ಸಂಘಟಿತರಾಗದಿದ್ದಲ್ಲಿ ಮುದ್ರಣ ನಗರಿ, ಮುದ್ರಣ ಕಾಶಿ ಎಂದು ಖ್ಯಾತಿ ಪಡೆದ ಗದಗ ಪ್ರಕಾಶನ ಮತ್ತು ಮುದ್ರಣ ಕ್ಷೇತ್ರಕ್ಕೆ ಹಿನ್ನಡೆಯಾಗಲಿದೆ ಎಂದು ವಿದ್ಯಾನಿಧಿ ಪ್ರಕಾಶನದ ಮಾಲೀಕ ಡಾ. ಜಯದೇವ ಮೆಣಸಗಿ ಆತಂಕ ವ್ಯಕ್ತಪಡಿಸಿದರು.

ಜಿನೇವಾದ ಭಾರತ ವರ್ಚುವಲ್ ಯೂನಿವರ್ಸಿಟಿ ಾರ್ ಪೀಸ್ ಆ್ಯಂಡ್ ಎಜುಕೇಶನ್‌ದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿಗೆ ಭಾಜನರಾಗಿದ್ದಕ್ಕೆ ನಗರದ ಬಸವರಾಜ ಅಯ್ಯಪ್ಪ ಅಂಗಡಿ ಮೆಮೋರಿಯಲ್ ಟ್ರಸ್ಟ್ ಹಾಗೂ ಮಾರುತಿ ಬುಕ್ ಡಿಪೋ ಆಶ್ರಯದಲ್ಲಿ ಸೋಮವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಅಚ್ಚು ಮೊಳೆ ಮುದ್ರಣ ಪದ್ಧತಿ ಇದ್ದಾಗ ಕಂಪ್ಯೂಟರ್‌ಗಳಿಗೆ ಭಾರಿ ಬೇಡಿಕೆ ಇದೆ. ಅದರಲ್ಲೂ ಚುನಾವಣೆಗೂ ಮುನ್ನ ಮತದಾರರ ಪಟ್ಟಿ ಮುದ್ರಣಕ್ಕಾಗಿ ಗದಗ ಸೇರಿದಂತೆ ಬೆಂಗಳೂರು ಇತರ ಜಿಲ್ಲೆಯ ಪ್ರಕಾಶಕರು, ಮುದ್ರಕರು ನುರಿತ ಅನುಭವಿಕ ಕಂಪ್ಯೂಜೀಟರ್‌ಗಳಿಗೆ ಅಧಿಕ ಸಂಬಳ ನೀಡಿ ಕೆಲಸ ಪಡೆಯುತ್ತಿದ್ದರು. ಮುದ್ರಣದಲ್ಲಿ ಕಂಪ್ಯೂಟರೀಕರಣ, ಹೊಸ ಹೊಸ ತಂತ್ರಜ್ಞಾನ ಆವಿಷ್ಕಾರದಿಂದಾಗಿ ಪ್ರಕಾಶನ ಮತ್ತು ಮುದ್ರಣಕ್ಕೆ ಹೆಸರಾಗಿದ್ದ ಗದಗ ಕ್ರಮೇಣ ತನ್ನ ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ಪ್ರಕಾಶಕರು ಮತ್ತು ಮುದ್ರಕರು ಸಂಘಟಿತರಾಗದಿದ್ದಲ್ಲಿ ಭವಿಷ್ಯದಲ್ಲಿ ವೃತ್ತಿನಿರತರು ಮುದ್ರಣ ಉದ್ಯಮವನ್ನು ಸ್ಥಗಿತ ಮಾಡುವ ಕಾಲ ಸನ್ನಿಹಿತ ಎಂದರು.

ನಗರದ ಮಾರುತಿ ಬುಕ್ ಸೆಂಟರ್ ಸೇರಿದಂತೆ ಶಾಬಾದಿಮಠ, ಸಂಕೇಶ್ವರ, ವಿಕ್ರಮ, ಹೊಂಬಾಳಿ, ವಿದ್ಯಾನಿಧಿ ಪ್ರಕಾಶನ, ಚೈತನ್ಯ, ಬಾಂಢಗೆ ಹೀಗೆ ಹಲವಾರು ಮುದ್ರಕ ಪ್ರಕಾಶಕರ ಕೊಡುಗೆಯನ್ನು ಡಾ. ಜಯದೇವ ಸ್ಮರಿಸಿದರು.

ಪ್ರೊ. ಎಸ್.ವೈ. ಚಿಕ್ಕಟ್ಟಿ, ಪ್ರಾಚಾರ್ಯ ಆರ್.ಜಿ. ಚಿಕ್ಕಮಠ, ಸಾಹಿತಿ ಅಂದಾನಪ್ಪ ವಿಭೂತಿ ಅವರು ಸಾಹಿತ್ಯ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ಜಯದೇವ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಸುರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅನಸೂಯಾ ಅಂಗಡಿ, ಪ್ರೊ. ಜಯಶ್ರೀ ಪಟ್ಟಣಶೆಟ್ಟಿ, ರುದ್ರಪ್ಪ ಅರಳಿ, ಮಹಾಲಿಂಗಪ್ಪ ರಂಜಣಗಿ, ಈಶ್ವರ ರೇವಣಕಿ, ವಿನಾಯಕ ಖೋನಾ, ಉಮೇಶ ಭೂಸ್ತ, ಅರ್ಜುನ ಖಟವಟೆ, ಬಸವರಾಜ ಇಂಗಳಳ್ಳಿ, ಚನ್ನಪ್ಪ ಸೂರಪ್ಪಗೌಡ್ರ, ದೇವೇಂದ್ರಪ್ಪ ಹೊನಗಣ್ಣವರ, ರಮಾನಂದ ಕಾಟೋಕರ, ಚನ್ನಬಸವ ಅಕ್ಕಿ, ಪರಶುರಾಮ ತೆರದಾಳ ಇತರರು ಇದ್ದರು.