ಬೆಂಗಳೂರು: "ನನ್ನ ಮೇಲೆ ಅಸೂಯೆಪಡುವುದರಿಂದ, ನನ್ನನ್ನು ಟೀಕೆ ಮಾಡುವುದರಿಂದ, ನನ್ನನ್ನು ಬಯ್ಯುವುದರಿಂದ ಕುಮಾರಸ್ವಾಮಿ ಅವರಿಗೆ ಖುಷಿಯಾಗಿ, ಅವರ ಆರೋಗ್ಯ ಸುಧಾರಣೆ ಆಗುವುದಾದರೆ ಅವರು ನನ್ನ ನಿಂದನೆ ಮುಂದುವರೆಸಲಿ" ಎಂದು DCM ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಈ ಅವಕಾಶದಿಂದಲೇ ದೀಪಿಕಾ, ಕತ್ರಿನಾ ರಾತ್ರೋ ರಾತ್ರಿ ಸ್ಟಾರ್ ಆಗಿದ್ದು! ವಿಜಯ್ ಮಲ್ಯ ಓಪನ್ ಟಾಕ್ | Vijay Mallya
ಶನಿವಾರ (ಜೂ.07) ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು.
"ನಾನು ಕುಮಾರಸ್ವಾಮಿ ಅವರನ್ನು ಗಮನಿಸುತ್ತಿದ್ದೇನೆ. ಅವರು ತಮ್ಮ ಖುಷಿಗೆ ಮಾತಾಡುತ್ತಿದ್ದಾರೆ. ಅವರು ಏನಾದರೂ ಮಾತನಾಡಲಿ. ಇದರಿಂದ ಅವರಿಗೆ ಖುಷಿಯಾಗಿ ಆರೋಗ್ಯ ಸುಧಾರಣೆ ಆಗುವುದಾದರೆ ಆಗಲಿ. ಅವರ ಆರೋಗ್ಯ ಸುಧಾರಣೆಯಾಗುವುದು ನನಗೆ ಮುಖ್ಯ" ಎಂದು ಹೇಳಿದರು. (ಏಜೆನ್ಸೀಸ್)