siddalinga swamy 
ಜಿಲ್ಲೆ

ಬಸನಗೌಡ ಪಾಟೀಲ್ ಯತ್ನಾಳ ಒಪ್ಪಿದರೆ ಶಿವಸೇನೆ ಪಕ್ಷಕ್ಕೆ ಸ್ವಾಗತಿಸುತ್ತೇವೆ

ರಾಯಚೂರು ವಿಜಯಪುರ ಶಾಸಕ ಬಸನಗೌಡ ಯತ್ನಾಳ್ ಹಾಗೂ ನಮ್ಮ ಉದ್ದೇಶ ಒಂದೇಯಾಗಿದ್ದು, ಅವರು ಒಪ್ಪಿಕೊಂಡರೆ ಒಂದೇ ಪ್ಲಾಟ್ ಫಾರಂನಲ್ಲಿ ಹೋರಾಟ ಮಾಡುವುದರ ಜತೆಗೆ ನಮ್ಮ ಪಕ್ಷಕ್ಕೆ ಸ್ವಾಗತಿಸುತ್ತೇವೆಂದು ಶಿವಸೇನೆ ಪಕ್ಷ ರಾಜ್ಯಾಧ್ಯಕ್ಷ ಆಂದೋಲ ಸಿದ್ಧಲಿಂಗ ಸ್ವಾಮಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ದೇಶದಲ್ಲಿ ಬಿಜೆಪಿ ಹಾಗೂ ಶಿವಸೇನೆ ಹಿಂದುತ್ವದ ಪರವಾಗಿ ಕೆಸಲ ಮಾಡುತ್ತದೆ. ಶಿವಸೇನೆ, ಬಿಜೆಪಿ ಬೇರೆ ಅಲ್ಲ. ಕೇಂದ್ರದಲ್ಲಿ ಎನ್‌ಡಿಎ ಮೈತ್ರಿ ಕೂಟ ಇದೆ. ರಾಜ್ಯದಲ್ಲಿ ಹಿಂದೂಗಳ ಮತ ಒಡೆಯದಂತೆ ಸಂಘಟನೆ ಮಾಡುತ್ತೇವೆ. ನಮ್ಮ ಶಿವಸೇನೆ ಮತ್ತು ಬಿಜೆಪಿ ಹೈಕಮಾಂಡ್ ಏನು ನಿರ್ಣಯ ಮಾಡುತ್ತೋ ಆ ನಿಟ್ಟಿನಲ್ಲಿ ನಾವು ಕರ್ನಾಟಕದಲ್ಲಿ ಮುಂದುವರಿಯುತ್ತೇವೆ ಎಂದರು.

ಆರ್‌ಎಸ್‌ಎಸ್ ಬಗ್ಗೆ ಮಾತನಾಡುವ ಸಚಿವ ಪ್ರಿಯಾಂಕ ಖರ್ಗೆ ,ಬಿಕೆ ಹರಿಪ್ರಸಾದ್, ಸಂತೋಷ ಲಾಡ್‌ಗೆ ಸಿಎಂ ಸಿದ್ದರಾಮಯ್ಯ ಕಡಿವಾಣ ಹಾಕಬೇಕು. ಒಳ್ಳೆಯ ಧ್ಯೇಯೋದ್ದೇಶದಿಂದಲೇ ಆರ್‌ಎಸ್‌ಎಸ್ 100 ವರ್ಷದ ಸಂಭ್ರಮಾಚರಣೆ ಮಾಡುತ್ತಿದೆ. ಆದರೆ ಆರ್‌ಎಸ್‌ಎಸ್ ಬಗ್ಗೆ ಹಗುರವಾಗಿ ಮಾತನಾಡುವುದು ಪ್ರಿಯಾಂಕ ಖರ್ಗೆಗೆ ಶೋಭೆ ತರುವುದಿಲ್ಲ. ಮೈಸಾಸುರ, ಭಸ್ಮಾಸುರ, ಮುಕಾಸುರ ಹೆಸರು ಕೇಳಿದ್ವಿ .ಸರ್ಕಾರದ ಕೆಲ ಮಂತ್ರಿಗಳು, ಪ್ರತಿನಿಧಿಗಳು ತಮ್ಮ ಬಾಯಿ ಚಪಲಕ್ಕೆ ಚಪಲಾಸುರರಂತೆ ಹೊರಹೊಮ್ಮುತ್ತಿದ್ದಾರೆ. ಶಿವಸೇನೆ ಪಕ್ಷದಿಂದ ಉಗ್ರವಾಗಿ ಖಂಡಿಸುತ್ತೇವೆ ಎಂದರು.

ಶತಾಯ ಗತಾಯ ಪ್ರಯತ್ನ ಮಾಡಿದರು ಯಾರು ಆರ್‌ಎಸ್‌ಎಸ್‌ಗೆ ಟಚ್ ಮಾಡಲು ಸಾಧ್ಯವಿಲ್ಲ. ಓಬ್ಬ ಭಾರತಿಯನಾಗಿ ರೆಜಿಸ್ಟರ್ ಇರಲಿ,ಅನ್ ರೆಜಿಸ್ಟರ್ ಇರಲಿ ಭಾರತದ ದೇಶದ ಬಗ್ಗೆ ಶ್ರದ್ಧೆ ಇಟ್ಕೋಂಡರೆ ದೇಶ ಭಕ್ತ ಅಗುತ್ತಾನೆ. ಡೋಂಗಿ ರಾಷ್ಟ್ರ ಭಕ್ತಿ ಆರ್‌ಎಸ್‌ಎಸ್‌ನಲ್ಲಿಲ್ಲ. ಡೋಂಗಿ ರಾಷ್ಟ್ರ ಭಕ್ತಿ ಇರೋದು ಇದನ್ನು ಟೀಕೆ ಮಾಡೋರ ಹತ್ತಿರ ಇದೆ. ರಾಜ್ಯಸಭಾ ಸದಸ್ಯರು ವಿಧಾನಸೌಧದಲ್ಲಿ ನಿಂತುಕೊಂಡು ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳುತ್ತಾರೆ. ತಮ್ಮ ತಟ್ಟೆಯಲ್ಲಿ ಕತ್ತೆ ಬಿದ್ದು ಒದ್ದಾಡುತ್ತಿದೆ. ಆದರೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡೋವ ನೈತ್ತಿಕತೆ ಕಾಂಗ್ರೆಸ್‌ನವರಿಗೆ ಇಲ್ಲವೆಂದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ವಿಜಯ ಪಾಟೀಲ್,ಚನ್ನಪ್ಪ ಗೌಡ,ಬಸನತಗೌಡ, ರಾಜಚಂದ್ರ ರಾಮನಗೌಡ, ಪ್ರಭು ಮಡಿವಾಳ ಇದ್ದರು.