ಸಂಡೂರು ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಮತ್ತು ಪ್ರಸ್ತುತ ಭಾರತ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಸಹಾಯಕ ನಿರ್ದೇಶಕಿ ರೂಪಾ, ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆ ಇಲಾಖೆ ನಿರ್ದೇಶಕ ಚಂದ್ರಶೇಖರಯ್ಯ, ಎನ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಡಾ.ವಿಎ.ಚೌಡಪ್ಪ ಇದ್ದರು. 
ಜಿಲ್ಲೆ

ಅಂಬೇಡ್ಕರ್ ಚಿಂತನೆ ಮರೆತರೆ ಭಾರತ ಶೂನ್ಯ

ಗಾಯತ್ರಿ ಮಾಲಿಪಾಟೀಲ್

ಸಂಡೂರು: ಅಂಬೇಡ್ಕರ್ ಚಿಂತನೆಗಳನ್ನು ಮರೆತರೆ ಭಾರತ ಶೂನ್ಯ. ಶ್ರಮದಿಂದ ಬೃಹತ್ ಸಂವಿಧಾನ ರಚಿಸಿದ ಕೀರ್ತಿ ಅಂಬೇಡ್ಕರ್ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಸರ್ಕಾರದ ಪ್ರದೇಶ ಅಭಿವೃದ್ಧಿ ಮಂಡಳಿ ಯೋಜನೆ ನಿರ್ದೇಶಕ ಡಿ.ಚಂದ್ರಶೇಖರಯ್ಯ ಹೇಳಿದರು.

ತಾಲೂಕಿನ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಕೋಶ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ವಿಎಸ್‌ಕೆ ವಿವಿ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್.ಅಂಬೇಡ್ಕರ್ ಚಿಂತನೆಗಳು ಮತ್ತು ಪ್ರಸ್ತುತ ಭಾರತ ಎಂಬ ರಾಜ್ಯಮಟ್ಟದ ವಿಚಾರ ಸಂಕಿರಣದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ಭಾರತ ಸಂವಿಧಾನದಲ್ಲಿ ಬುದ್ಧ ಮತ್ತು ಅಂಬೇಡ್ಕರ್ ಚಿಂತನೆಗಳು ಹಾಗೂ ಸಾಮಾಜಿಕ ಅಂಶಗಳು ಅಡಗಿವೆ. ಅಂಬೇಡ್ಕರ್ ಅವರ 22 ಸಾವಿರ ಪುಟದ ಕೈಬರಹದ ಪ್ರತಿಗಳು ದೊರಕಿವೆ. ಭಾರತ ಸಂವಿಧಾನ ಸಾವಿರ ವರ್ಷಗಳ ಕಾಲ ಬಲಿಷ್ಠವಾಗಿರುತ್ತದೆ ಎಂದರು.

ಕೇಂದ್ರದ ನಿರ್ದೇಶಕ ಡಾ.ಬಿ.ರವಿ, ಸಹ ನಿರ್ದೇಶಕಿ ರೂಪಾ, ಎನ್‌ಎಸ್‌ಎಸ್ ಸಂಘಟನಾ ಕಾರ್ಯದರ್ಶಿ ಡಾ.ಚೌಡಪ್ಪ, ಪ್ರಮುಖರಾದ ಡಾ.ಕೆ.ಜಿ.ಸುಮಾ, ಬಸವರಾಜ ಈಳಿಗನೂರು ಇತರರಿದ್ದರು.