ಜಿಲ್ಲೆ

ಮೈಲಾರಿಯಲ್ಲಿ ಇಡ್ಲಿ, ದೋಸೆ ಸವಿದ ಸಿಎಂ

ಅವಿನಾಶ್ ಜೈನಹಳ್ಳಿ


ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಬೆಳಗ್ಗೆ ನಗರದ ಅಗ್ರಹಾರದ ಬಳಿ ಇರುವ ಮೈಲಾರಿ ಹೋಟೆಲ್‌ನಲ್ಲಿ ಇಡ್ಲಿ, ದೋಸೆ ಸವಿದರು. ಇತ್ತೀಚೆಗೆ ಮೈಸೂರಿಗೆ ಆಗಮಿಸಿದ್ದಾಗಲೂ ಮೈಲಾರಿ ಹೋಟೆಲ್‌ನಲ್ಲಿ ತಿಂಡಿ ತಿಂದಿದ್ದರು.

ಕೆಆರ್‌ಎಸ್ ಜಲಾಶಯಕ್ಕೆ ಸೋಮವಾರ ಬಾಗಿನ ಅರ್ಪಿಸಲು ತೆರಳುವ ಮುನ್ನ ಮೈಲಾರಿ ಹೋಟೆಲ್‌ನಲ್ಲಿ ಸಾಮಾನ್ಯರಂತೆ ಎಲ್ಲರ ಜತೆಗೆ ಕೂತು ತಿಂಡಿ ತಿಂದು ಹೋದರು. ಸಚಿವ ಚೆಲುವರಾಯಸ್ವಾಮಿ, ಮುಡಾ ಅಧ್ಯಕ್ಷ ಕೆ. ಮರಿಗೌಡ ಸೇರಿದಂತೆ ಇತರರು ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಿದರು.