ಇಂಡಿ:11 ರಂದು ನಡೆಯುವ ಭೀಮಾಶಂಕರ ಸಕ್ಕರೆ ಕಾರ್ಖಾನೆ ಚುನಾವಣೆಯಲ್ಲಿ ಗುರುತಿನ ಪತ್ರ ಇಲ್ಲದವರು ಎರಡು ಫೋಟೊ ತರಬೇಕು ಎಂದು ಚುನಾವಣೆ ಅಧಿಕಾರಿ ಮತ್ತು ಕಂದಾಯ ಉಪ ವಿಭಾಗಾಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.
ಗುರುತಿನ ಪತ್ರ ಇಲ್ಲದವರಿಗೆ ಮತ ನೀಡಲು ಅವಕಾಶವಿಲ್ಲ. ಹೀಗಾಗಿ ಎರಡು ೋಟೋ ತಂದರೆ ಮೊದಲು ಗುರುತಿನ ಪತ್ರ ಪಡೆದು ನಂತರ ಮತದಾನಕ್ಕೆ ಅವಕಾಶ ಕೊಡಲಾಗುವುದು.
ಮತದಾನಕ್ಕೆ ಆಧಾರ್ ಕಾರ್ಡ್ ಅಥವಾ ಯಾವುದೇ ಗುರುತಿನ ಚೀಟಿ ತಂದು ಮತ ಸಲ್ಲಿಸಬಹುದಾಗಿದೆ.
ಚುನಾವಣೆ ನಡೆಯುವ ಮರಗೂರ ಸಕ್ಕರೆ ಕಾರ್ಖಾನೆಯ ಸಿದ್ಧೇಶ್ವರ ಗೋದಾಮಿನ ಸುತ್ತಲೂ 500 ಮೀಟರ್ ವ್ಯಾಪ್ತಿಯಲ್ಲಿ 144 ಅಡಿ ನಿಷೇಧಾಜ್ಞೆ ಜಾರಿಯಿದೆ. ಬೆಳಗ್ಗೆ 9 ರಿಂದ 4 ಗಂಟೆಯವರೆಗೆ ಚುನಾವಣೆ ನಡೆಯಲಿದ್ದು, ಸಂಜೆಯೇ ಲಿತಾಂಶ ನಿರೀಕ್ಷಿಸಲಾಗಿದೆ ಎಂದು ಚುನಾವಣೆ ಅಧಿಕಾರಿ ಅಬೀದ್ ಗದ್ಯಾಳ ತಿಳಿಸಿದ್ದಾರೆ.