ಜಿಲ್ಲೆ

ಛಾಯಾಗ್ರಾಹಕರ ಸಮಸ್ಯೆ ಗುರುತಿಸಿ, ಸ್ಪಂದಿಸಲಿ

ಜಗದೀಶ ಹೊಂಬಳಿ

ಬೆಳಗಾವಿ: ಸರ್ಕಾರ ಛಾಯಾಚಿತ್ರಕಾರರ ಸಮಸ್ಯೆಗಳನ್ನು ಗುರುತಿಸಿ ಸ್ಪಂದಿಸುವಂತಾಗಬೇಕು ಎಂದು ಬೆಳಗಾವಿ ಜಿಲ್ಲಾ ಛಾಯಾಗ್ರಾಹಕರ ಮತ್ತು ವಿಡಿಯೋಗ್ರಾಫರರ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಬಸವರಾಜ ರಾಮಣ್ಣವರ ಅಭಿಪ್ರಾಯಪಟ್ಟರು.
 ಸಂಘದಿಂದ ವಡಗಾವಿಯ ಉಪ್ಪಾರಗಲ್ಲಿ ಬನಶಂಕರಿದೇವಿ ದೇವಸ್ಥಾನದ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ನೂತನ ಅಧ್ಯಕ್ಷರ ಮತ್ತು ಕಾರ್ಯದರ್ಶಿಗಳ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸ್ಮೈಲ್ ಪ್ಲೀಜ್ ಎಂದು ಹೇಳಿ ಎಲ್ಲರ ಮಧುರ ಕ್ಷಣಗಳನ್ನು ಸೆರೆ ಹಿಡಿದು ಕೊಡುವ ಛಾಯಾಚಿತ್ರಕಾರ ಮತ್ತು ವಿಡಿಯೋಗ್ರಾಫರ್‌ಗಳು ತಮ್ಮ ಜೀವನದಲ್ಲಿ ನಗುವಿಲ್ಲದೇ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಆನಿಟ್ಟಿನಲ್ಲಿ ಸರ್ಕಾರ ಅವರ ಆರ್ಥಿಕತೆ ಸುಧಾರಿಸುವತ್ತ ಗಮನ ಹರಿಸಬೇಕಿದೆ ಎಂದರು.
 ನೂತನ ಅಧ್ಯಕ್ಷ ಬಸವರಾಜ ರಾಮಣ್ಣವರ ಮತ್ತು ಕಾರ್ಯದರ್ಶಿ ಪ್ರಕಾಶ ಕಳಸದ ಅವರಿಗೆ ಹಾಲಿ ಅಧ್ಯಕ್ಷ ಸತೀಶ ಶೆಟ್ಟಿ ಮತ್ತು ಕಾರ್ಯದರ್ಶಿ ಮಂಜುನಾಥ ಕುಂದರಗಿ ಅಧಿಕಾರ ಹಸ್ತಾಂತರಿಸಿ, ಗೌರವಿಸಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಸತೀಶ ಶೆಟ್ಟಿ ತಮ್ಮ ಅಧಿಕಾರಾವಧಿಯಲ್ಲಿ ಸಂಘದ ವತಿಯಿಂದ ಕೈಗೊಂಡ ಕೆಲಸಗಳ ಬಗ್ಗೆ ಪ್ರಾತ್ಯಕ್ಷಿಕೆಯೊಂದಿಗೆ ವಿವರಣೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿದ ಅಮೃತ ಚರಂತಿಮಠ ಪ್ರಾಸ್ತಾವಿಕ ಮಾತನಾಡಿದರು. ಪ್ರಕಾಶ ಕಳಸದ ವಂದಿಸಿದರು.
 ಉಪಾಧ್ಯಕ್ಷರಾಗಿ ನಾಮದೇವ ಕೋಳೆಕರ ಮತ್ತು ಬಿ.ಎಸ್. ಪಾಟೀಲ, ಜಂಟಿ ಕಾರ್ಯದರ್ಶಿ ಶೇಖರ ಲೋಖಂಡೆ ಮತ್ತು ಅನುರೂಪ ನಾಯ್ಕ, ಖಜಾಂಚಿಯಾಗಿ ಸುರೇಶ ಮುರಕುಂಬಿ, ಪಿಆರ್‌ಒ ಮಂಜುನಾಥ ಕುಂದರಗಿ, ಸಲಹೆಗಾರರಾಗಿ ಸತೀಶ ಶೆಟ್ಟಿ, ರಾಜಾ ಕಟ್ಟಿ, ಮೋಹನ ಕೋಪರ್ಡೆ, ಅಮೃತ ಚರಂತಿಮಠ, ಅಶೋಕ ನಾಯ್ಕ, ಅಶೋಕ ಶ್ರೀವರ್ಮಾ, ಮಾಣಿಕ ಪವಾರ ಸಂಘದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾಗಿದ್ದಾರೆ.