ಮೈಸೂರು; ಮಕ್ಕಳ ಪ್ರತಿಭೆ ಗುರುತಿಸಿ, ಸರಿಯಾದ ಮಾರ್ಗದರ್ಶನ ಮಾಡುವ ಕೆಲಸ ಆಗಬೇಕಿದೆ ಎಂದು ವಿಶ್ರಾಂತ ಕುಲಪತಿ ಡಾ.ಕೆ. ಚಿದಾನಂದಗೌಡ ಹೇಳಿದರು.
ಮರಿಮಲ್ಲಪ್ಪನವರ ಪದವಿಪೂರ್ವ ಕಾಲೇಜು ವತಿಯಿಂದ ಕಲಾಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ ಸಾಂಸ್ಕೃತಿಕ ಮತ್ತು ಕ್ರೀಡಾ ವೇದಿಕೆಯ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಸನ್ಮಾರ್ಗ ತೋರುವ ಜತೆಗೆ ಭವಿಷ್ಯದ ಬಗ್ಗೆ ನಿರ್ದಿಷ್ಟ ಗುರಿ ಇಟ್ಟುಕೊಂಡು, ಅದನ್ನು ಸಾಧನೆಗೆ ಶ್ರಮಿಸಲು ಮಾರ್ಗದರ್ಶನ ನೀಡಬೇಕು ಎಂದರು.
ಶಿಕ್ಷಣದಿಂದ ಮಾತ್ರ ಏನಾದರೂ ಸಾಧನೆ ಮಾಡಲು ಸಾಧ್ಯ.ಆದ್ದರಿಂದ ಶಿಕ್ಷಣ ಪಡೆದುಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಮಕ್ಕಳು ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಬೇಕು ಎಂದರು.
ಶೈಕ್ಷಣಿಕ ಜೀವನ ಅನೇಕ ಸವಾಲುಗಳಿಂದ ಕೂಡಿರುತ್ತದೆ. ಬದುಕಿಗೆ ಪದವಿ ಪ್ರಮಾಣ ಮುಖ್ಯವಲ್ಲ. ಸಮಾಜದಲ್ಲಿ ಉತ್ತಮವಾಗಿ ಬದುಕನ್ನು ನಡೆಸುವುದು ಮುಖ್ಯ. ಅದಕ್ಕೆ ಶಿಕ್ಷಣದ ಮೂಲಕ ಮುಂದಿನ ಭದ್ರಬುನಾದಿಯನ್ನು ರೂಪಿಸಿಕೊಳ್ಳ ಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಮರಿಮಲ್ಲಪ್ಪನವರ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಪ್ರೊ.ಕೆ.ಎನ್.ಪಂಚಾಕ್ಷರಸ್ವಾಮಿ, ಪ್ರಾಂಶುಪಾಲೆ ಎಂ.ಎಸ್.ವಿಜಯ, ಶೈಕ್ಷಣಿಕ ಅಧಿಕಾರಿ ಮಂಗಳಾ ಮುದ್ದುಮಾದಪ್ಪ, ವಿವಿಧ ವೇದಿಕೆಗಳ ಸಂಚಾಲಕರಾದ ನಂದೀಶ್‌ಕುಮಾರ್, ಎಚ್.ಬಿ.ಆಶಾ, ಎನ್.ಬಿ.ಪರಶಿವಮೂರ್ತಿ ಇನ್ನಿತರರಿದ್ದರು.