ದೇವರಹಿಪ್ಪರಗಿ: ತಾಲೂಕಿನ ಕೋರವಾರ ಗ್ರಾಮದ ಜ್ಞಾನಾಂಜನ ಶಿಕ್ಷಣ ಸಂಸ್ಥೆ ವತಿಯಿಂದ ಸೆ.5 ರಂದು ಜರುಗಲಿರುವ ಶಿಕ್ಷಕರ ದಿನೋತ್ಸವ ನಿಮಿತ್ತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗಾಗಿ ಜಿಲ್ಲಾಮಟ್ಟದ ಜ್ಞಾನಸಿರಿ ಆದರ್ಶ ಶಿಕ್ಷಕ ಪ್ರಶಸ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಶಿಕ್ಷಕರು ಸ್ವವಿವರವುಳ್ಳ ಗುರುತಿನ ಪತ್ರದೊಂದಿಗೆ ತಮ್ಮ ಸೇವಾವಧಿಯಲ್ಲಿ ಮಾಡಿರುವ ಶೈಕ್ಷಣಿಕ ಅಭಿವೃದ್ಧಿ ಕಾರ್ಯಗಳ ಸಂಕ್ಷಿಪ್ತ ವರದಿ ಲಗತ್ತಿಸಿ ಕಳುಹಿಸಬೇಕು. ವಿಜಯಪುರ ಜಿಲ್ಲೆಯ ಎಲ್ಲ ತಾಲೂಕಿನ ಶಿಕ್ಷಕರು ಅರ್ಜಿ ಸಲ್ಲಿಸಬಹುದಾಗಿದ್ದು, ಆಗಸ್ಟ್ 30 ಕೊನೆಯ ದಿನವಾಗಿದೆ. ಅರ್ಜಿಗಳನ್ನು- ಅಧ್ಯಕ್ಷರು ಜ್ಞಾನಾಂಜನ ಶಿಕ್ಷಣ ಸಂಸ್ಥೆ ಕೋರವಾರ ದೇವರಹಿಪ್ಪರಗಿ ತಾಲೂಕು ಅವರಿಗೆ ಕಳುಹಿಸಬೇಕು. ಮಾಹಿತಿಗಾಗಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುನೀಲ ಬಿರಾದಾರ ಮೊ. 9620664476 ಅವರನ್ನು ಸಂಪರ್ಕಿಸಿ ಎಂದು ಪ್ರಕಟಣೆ ತಿಳಿಸಿದೆ.