ತಲ್ಲೂರ: ನವ ದಂಪತಿ ಜೀವನದಲ್ಲಿ ಆದರ್ಶ ಗುಣ ಅಳವಡಿಸಿಕೊಂಡು ಪರಸ್ಪರ ಹೊಂದಾಣಿಕೆಯಿಂದ ಸಹಬಾಳ್ವೆ ನಡೆಸಬೇಕು ಎಂದು ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಹೇಳಿದರು.
ಸಮೀಪದ ಆಲದಕಟ್ಟಿ ಕೆ.ಎಂ ಗ್ರಾಮದಲ್ಲಿ ಶ್ರೀ ಶಿವಯೋಗೀಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಸರ್ವಧರ್ಮ ಸಾಮೂಹಿಕ ವಿವಾಹ ಕಾರ್ಯಕ್ರಮ ಆಶೀರ್ವಚನ ನೀಡಿದರು.
ಅಂಗನವಾಡಿ ಮೆಲ್ವೀಚಾರಕಿ ರಾಜೇಶ್ವರಿ ತೆರಲಿ, ಹಾಲು ಉತ್ಪಾದಕರ ಸಹಕಾರ ಸಂದ ಅಧ್ಯ ಎಸ್.ಎಸ್.ಮುಗಳಿ ಮಾತನಾಡಿ, ಇಂದಿನ ದುಬಾರಿ ದಿನಗಳಲ್ಲಿ ಆರ್ಥಿಕ ಹೊರೆ ತಗ್ಗಿಸುವ ನಿಟ್ಟಿನಲ್ಲಿ ಸಾಮೂಹಿಕ ವಿವಾಹ ಬಡಜನಜರಿಗೆ ಅನುಕೂಲವಾಗಿದೆ ಎಂದರು.
ಮುನವಳ್ಳಿ ಸೋಮಶೇಖರಮಠದ ಮುರುಂದ್ರ ಸ್ವಾಮೀಜಿ, ಚಂದ್ರಯ್ಯ ಹಿರೇಮಠ, ಬಸಲಿಂಗಯ್ಯ ಹಿರೇಮಠ, ವಿಶಾಲ ಹಿರೇಮಠ, ಮಲ್ಲಿಕಾರ್ಜುನ ಹಿರೇಮಠ, ಮುಖಂಡರಾದ ಮಡಿವಾಳಪ್ಪ ಬಿದರಗಡ್ಡಿ, ನಾಗಪ್ಪ ಚೌಡಪ್ಪನವರ, ಅನಿಲ ವಂಟಮುರಿ, ರಾಜು ಗುರನಗೌಡ್ರ, ರಾಯಪ್ಪ ರಾಯಣ್ಣವರ, ಸಿದ್ದು ಕಡಕೋಳ, ಸೋಮನಿಂಗಪ್ಪ ಚವಡಪ್ಪನವರ, ವಿಠ್ಠಲ ಗುರನಗೌಡ್ರ, ನಾಗಪ್ಪ ಚವಡಪ್ಪನವರ, ಅಜ್ಜಪ್ಪ ಚಡಪ್ಪನವರ, ಕಿರಣ ಹಿರೇಮಠ, ನಿಂಗನಗೌಡ ಸಣ್ಣಗೌಡ್ರ, ಈರಪ್ಪ ಬೆನಕಟ್ಟಿ ಇತರರಿದ್ದರು.