ಜಿಲ್ಲೆ

ಕನಕರ ಚಿಂತನೆ, ಆದರ್ಶ ಸರ್ವಕಾಲಕ್ಕೂ ಪ್ರಸ್ತುತ: ಮಾಜಿ ಸಚಿವ ಸುಧಾಕರ್ ಹೇಳಿಕೆ

Chitradurga

ಹಿರಿಯೂರು: ದಾಸ ಶ್ರೇಷ್ಠ ಕನಕದಾಸರ ಸಾಮಾಜಿಕ ಆದರ್ಶ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ ಎಂದು ಮಾಜಿ ಸಚಿವ ಡಿ.ಸುಧಾಕರ್ ಹೇಳಿದರು.

ತಾಲೂಕಿನ ಸೊಂಡೆಕೆರೆ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ಕನಕದಾಸರ ಜಯಂತ್ಯುತ್ಸವದಲ್ಲಿ ಮಾತನಾಡಿದರು.

ಸಾಮಾಜಿಕ ಪರಿವರ್ತನೆ, ಭಕ್ತಿ ಮಾರ್ಗದತ್ತ ಜನರನ್ನು ಕೊಂಡೊಯ್ದ ಕನಕದಾಸರ ಮೌಲ್ಯಯುತ ಕೀರ್ತನೆಗಳ ಸಾರವನ್ನು ಸರ್ವರೂ ಅರಿಯಬೇಕಿದೆ ಎಂದರು.

ಕೆಪಿಸಿಸಿ ಸದಸ್ಯ ಕಂದಿಕೆರೆ ಸುರೇಶ್‌ಬಾಬು ಮಾತನಾಡಿ, ಕನಕದಾಸರು ಅಸಮಾನತೆ, ಜಾತಿಗಳ ವಿರುದ್ಧ ಹೋರಾಟದ ಮೂಲಕ ಸಮಾಜವನ್ನು ಒಗ್ಗೂಡಿಸಲು ಪ್ರಯತ್ನಿಸಿದರು ಎಂದರು.

ಎಂ.ಡಿ ಕೋಟೆ ಗ್ರಾಪಂ ಅಧ್ಯಕ್ಷ ನರಸಿಂಹಮೂರ್ತಿ, ಸದಸ್ಯರಾದ ಶಿಲ್ಪ, ಮಂಜುನಾಥ್, ಆಶಾರಾಣಿ, ಭಾಗ್ಯಮ್ಮ, ಅನ್ನಪೂರ್ಣಮ್ಮ, ಕೃಷ್ಣಸ್ವಾಮಿ, ಶಿವಮೂರ್ತಿ ಇತರರಿದ್ದರು.