ಮಂಗಳೂರು : ಇನ್ಸ್‌ಟಿಟ್ಯೂಟ್ ಆ್ ಚಾರ್ಟರ್ಡ್ ಅಕೌಂಟೆಂಟ್ಸ್ ಆ್ ಇಂಡಿಯಾ (ಐಸಿಎಐ) ಮಂಗಳೂರು ವತಿಯಿಂದ ‘ದಕ್ಷ್’ಚಾರ್ಟರ್ಡ್ ಅಕೌಂಟೆಂಟ್‌ಗಳ ರಾಷ್ಟ್ರೀಯ ಸಮ್ಮೇಳನ ಡಿ.12 ಮತ್ತು 13ರಂದು ನಗರದ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ
ಸಮ್ಮೇಳನವನ್ನು ಐಸಿಎಐ ಮಾಜಿ ಅಧ್ಯಕ್ಷ ಸಿಎ ಅನಿಕೇತ್ ಸುನಿಲ್ ತಲಾಟಿ ಉದ್ಘಾಟಿಸಲಿದ್ದಾರೆ. ಮಾಜಿ ಸಚಿವ ಪ್ರಮೋದ್
ಮಧ್ವರಾಜ್ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಕೀಲರಾದ ಭರತ್ ರೈ ಚಂದಾನಿ, ಕೆ.ಕೆ. ಚೈತನ್ಯ, ಸಿಎ ದುರ್ಗೇಶ್ ಪಾಂಡೆ, ಸಿಎ ಕೆ. ಗುರುರಾಜ್ ಆಚಾರ್ಯ, ಸಿಎ ಬಿ. ಚಂದ್ರಕಾಂತ್ ರಾವ್ ಸಹಿತ ಹಲವು ಸಂಪನ್ಮೂಲಗ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ಎಂದು ಐಸಿಎಐ ಮಂಗಳೂರು ಅಧ್ಯಕ್ಷ ಗೌತಮ್ ಪೈ ಡಿ. ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ರಾಷ್ಟ್ರೀಯ ಸಮ್ಮೇಳನವು ಸಿಎ ಸಮುದಾಯದ ವೃತ್ತಿಪರರಿಗೆ ವೃತ್ತಿಯ ನಿರ್ಣಾಯಕ ಅಂಶಗಳ ಬಗ್ಗೆ ಜ್ಞಾನ ಪಡೆಯಲು
ವೇದಿಕೆಯಾಗಿದೆ. ಕರಾವಳಿ ಹಾಗೂ ನೆರೆಯ ರಾಜ್ಯಗಳಿಂದ 600ಕ್ಕೂ ಅಧಿಕ ಸಿಎ ವೃತ್ತಿಪರರು ಭಾಗವಹಿಸಲಿದ್ದಾರೆ. ಎರಡು ದಿನದ ಸಮ್ಮೇಳನದಲ್ಲಿ ಅಕೌಂಟಿಂಗ್‌ನಲ್ಲಿ ತಂತ್ರಜ್ಞಾನ ಮತ್ತು ಆಟೋಮೇಷನ್, ಆದಾಯ ತೆರಿಗೆ ಮತ್ತು ಜಿಎಸ್‌ಡಿ ಬೆಳವಣಿಗೆ, ಸೈಬರ್
ಭದ್ರತೆ, ೆರೆನ್ಸಿಕ್ ಅಕೌಂಟಿಂಗ್ ಮತ್ತು ಇನ್ವೆಸ್ಟಿಗೇಟಿವ್ ಸರ್ವೀಸಸ್ ಸೇರಿದಂತೆ ಹಲವು ಪ್ರಮುಖ ವಿಷಯಗಳ ಕುರಿತು ತಜ್ಞರ ಜತೆ ಸಂವದ ನಡೆಯಲಿದೆ ಎಂದು ಅವರು ತಿಳಿಸಿದರು.
ಐಸಿಎಐ ಮಂಗಳೂರು ಘಟಕದ ಉಪಾಧ್ಯಕ್ಷ ಸಿಎ ಪ್ರಶಾಂತ್ ಪೈ, ಕಾರ್ಯದರ್ಶಿ ಸಿಎ ಡೇನಿಯಲ್ ಪಿರೇರಾ, ಕೋಶಾಧಿಕಾರಿ ಸಿಎ ಮಮತಾ ರಾವ್, ಸಿಎ ಪ್ರಸನ್ನ ಶೆಣೈ, ನಿಕಟಪೂರ್ವ ಅಧ್ಯಕ್ಷ ಸಿಎ ಗೌತಮ್ ನಾಯಕ್ ಉಪಸ್ಥಿತರಿದ್ದರು.