ಜಿಲ್ಲೆ

ಮಂಗಳೂರು ವಿಮಾನ ನಿಲ್ದಾಣಕ್ಕೆ ಎಸಿಐ ಸದಸ್ಯತ್ವ

Dakshina Kannada

ಮಂಗಳೂರು: ಮಂಗಳೂರು ಸಹಿತ ದೇಶದ ಮೂರು ವಿಮಾನ ನಿಲ್ದಾಣಗಳಿಗೆ ಏರ್‌ಪೋರ್ಟ್ಸ್ ಕೌನ್ಸಿಲ್ ಇಂಟರ್‌ನ್ಯಾಶನಲ್(ಎಸಿಐ) ನೂತನ ಸದಸ್ಯತ್ವದ ಗೌರವ ದೊರೆತಿದೆ.

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಅಹ್ಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಲಖನೌ ಚೌಧರಿ ಚರಣ್‌ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಎಸಿಐ ನೂತನ ಸದಸ್ಯತ್ವ ಪಡೆದ ವಿಮಾನ ನಿಲ್ದಾಣಗಳು. ಬೆಂಗಳೂರು, ಮುಂಬೈ ಮತ್ತು ನವದೆಹಲಿ ಏರ್‌ಪೋರ್ಟ್‌ಗಳು ಈ ಹಿಂದೆಯೇ ಎಸಿಐ ಸದಸ್ಯತ್ವ ಪಡೆದಿವೆ.