ಬಾಗಲಕೋಟೆ: ಇಂದು ನಿಧನರಾದ ಖ್ಯಾತ ಪ್ರವಚನಕಾರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ಅವರ ಪಾರ್ಥಿವ ಶರೀರದ ಅಂತಿಮಸಂಸ್ಕಾರ ಇದೀಗ ಪೂರ್ಣಗೊಂಡಿದೆ.
ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ಇಸ್ಲಾಂ ಧರ್ಮದ ವಿಧಿ-ವಿಧಾನದಂತೆ ಅವರ ಅಂತಿಮಕ್ರಿಯೆ ನೆರವೇರಿತು. ಮಹಾಲಿಂಗಪುರದ ಅವರ ತೋಟದ ಜಮೀನಿನಲ್ಲಿ ನೂರಾರು ಅಭಿಮಾನಿಗಳು, ಸಂಬಂಧಿಕರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ನಡೆಸಲಾಯಿತು.
82 ವರ್ಷದ ಇಬ್ರಾಹಿಂ ಸುತಾರ ಅವರು ರಬಕವಿ-ಬನಹಟ್ಟಿ ತಾಲೂಕಿನ ಮಹಲಿಂಗಪುರದಲ್ಲಿನ ತಮ್ಮ ಭಾವೈಕ್ಯ ನಿವಾಸದಲ್ಲಿ ಇಂದು ಬೆಳಗ್ಗೆ ಹೃದಯಾಘಾತಕ್ಕೆ ಒಳಗಾಗಿ ಕೊನೆಯುಸಿರೆಳೆದಿದ್ದರು.