ಜಿಲ್ಲೆ

ಐಎಎಸ್ ಅಧಿಕಾರಿಗಳ ವರ್ಗಾವಣೆ ಭರ್ಜರಿ, ಆಡಳಿತಕ್ಕೆ ಸರ್ಜರಿ: ಮುಖ್ಯಮಂತ್ರಿ ಯಡಿಯೂರಪ್ಪ ನಿಷ್ಠುರ ಹೆಜ್ಜೆ

ರಮೇಶ್​ ಕುಮಾರ್​​ ಬಿ ಎಡಮೋಳೆ

ಬೆಂಗಳೂರು: ಕರೋನೋತ್ತರ ಬಜೆಟ್ ಹೊಸ್ತಿಲಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಆಡಳಿತಕ್ಕೆ ಭರ್ಜರಿ ಸರ್ಜರಿ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದು, ಸವಾಲಿನ ದಿನಗಳನ್ನು ನಿಭಾಯಿಸಲು ನಿಷ್ಠುರ ನಡೆ ಅನಿವಾರ್ಯವೆಂಬ ಸಂದೇಶ ರವಾನಿಸಿದ್ದಾರೆ. ಕ್ರಿಯಾಶೀಲ ಹಾಗೂ ಸರ್ಕಾರಕ್ಕೆ ಹೆಸರು ತರಬಲ್ಲಂತಹ ಅಧಿಕಾರಿಗಳಿಗೆ ಪ್ರಮುಖ ಇಲಾಖೆಗಳ ಜವಾಬ್ದಾರಿ ಕೊಡುವ ಮೂಲಕ ತಮ್ಮ ಇರಾದೆ ಏನೆಂಬುದು ಬಿಎಸ್​ವೈ

ಸ್ಪಷ್ಟಪಡಿಸಿದ್ದು, ಮುಂದಿನ ಬಜೆಟ್ ಪರಿಣಾಮಕಾರಿ ಅನುಷ್ಠಾನಕ್ಕೆ ಆಡಳಿತ ಯಂತ್ರಾಂಗವನ್ನು ಸಜ್ಜುಗೊಳಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

41 ಐಎಎಸ್​ಗಳ ಸ್ಥಾನ ಪಲ್ಲಟ: ಹಿರಿಯ ಅಧಿಕಾರಿ ವಿ.ರಶ್ಮಿ ಮಹೇಶ್​ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆ ನೀಡಲಾಗಿದ್ದರೆ, ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್​ಗೆ ನಗರಾಭಿವೃದ್ಧಿ ಇಲಾಖೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಸಮ ಪ್ರಭಾರ ವಹಿಸಲಾಗಿದೆ. ಆರೋಗ್ಯ ಇಲಾಖೆ ಆಯುಕ್ತರಾಗಿದ್ದ ಪಂಕಜ್​ಕುಮಾರ್ ಪಾಂಡೆ, ಬೆಂಗಳೂರು ನಗರ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಗಳು ಸೇರಿ ಒಟ್ಟು 41 ಐಎಎಸ್ ಅಧಿಕಾರಿಗಳ ಸ್ಥಾನಪಲ್ಲಟವಾಗಿದೆ. ಇಲಾಖೆಗಳು, ಬಿಬಿಎಂಪಿ ಸಹಿತ ಜಿಲ್ಲಾ ಆಡಳಿತಕ್ಕೂ ಸರ್ಜರಿ ಮಾಡಲಾಗಿದೆ.

  • ತುಷಾರ್ ಗಿರಿನಾಥ್​-ಪ್ರಧಾನ ಕಾರ್ಯದರ್ಶಿ ಸಮಪ್ರಭಾರ, ನಗರಾಭಿವೃದ್ಧಿ ಇಲಾಖೆ ವಿ.ರಶ್ಮಿ ಮಹೇಶ್-ಪ್ರಧಾನ ಕಾರ್ಯದರ್ಶಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
  • ಡಾ.ಜೆ.ರವಿಶಂಕರ್-ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ
  • ಡಾ.ಕೆ.ವಿ.ತ್ರಿಲೋಕಚಂದ್ರ-ಆಯುಕ್ತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಆಯುಷ್ ಸೇವೆಗಳು
  • ಡಾ.ಎಂ.ವಿ.ವೆಂಕಟೇಶ್-ಆಯುಕ್ತ, ಜಲಾನಯನ ಅಭಿವೃದ್ಧಿ
  • ಡಾ.ಬಗಾದಿ ಗೌತಮ್​ಅಪರ ಆಯುಕ್ತ, ವಾಣಿಜ್ಯ ತೆರಿಗೆಗಳು (ಜಾರಿ)
  • ಎಂ.ಕನಗವಲ್ಲಿ-ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮ
  • ಡಾ.ವಿ.ರಾಮ್ ಪ್ರಸಾತ್ ಮನೋಹರ್-ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಕೈಗಾರಿಕಾ ಮೂಲಸೌಲಭ್ಯ ಅಭಿವೃದ್ಧಿ ನಿಗಮ
  • ಆರ್.ವೆಂಕಟೇಶ್​ಕುಮಾರ್-ಜಂಟಿ ಕಾರ್ಯದರ್ಶಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ
  • ಜಿ.ಎನ್.ಶಿವಮೂರ್ತಿ-ಆಯುಕ್ತ, ಕಬ್ಬು ಅಭಿವೃದ್ಧಿ ಮತ್ತು ನಿರ್ದೇಶಕ ಸಕ್ಕರೆ
  • ಜೆ.ಮಂಜುನಾಥ್-ಜಿಲ್ಲಾಧಿಕಾರಿ, ಬೆಂಗಳೂರು ನಗರ ಜಿಲ್ಲೆ
  • ಡಾ.ಬಿ.ಆರ್.ಮಮತಾ-ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಸಾರ್ವಜನಿಕ ಜಮೀನುಗಳ ನಿಗಮ
  • ಹೆಫ್ಸಿಬಾರಾಣಿ ಕೊರ್ಲಪಾಟಿ-ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮ
  • ಡಾ.ರಾಕೇಶ್​ಕುಮಾರ್-ನಿರ್ದೇಶಕ, ಪ್ರವಾಸೋದ್ಯಮ
  • ಡಾ.ಆರ್.ಸೆಲ್ವಮಣಿ-ಜಿಲ್ಲಾಧಿಕಾರಿ, ಕೋಲಾರ
  • ಎಸ್.ಅಶ್ವತಿ-ಜಿಲ್ಲಾಧಿಕಾರಿ, ಮಂಡ್ಯ
  • ಎಂ.ಪಿ.ಮುಳೈ ಮುಹಿಲನ್-ಜಿಲ್ಲಾಧಿಕಾರಿ, ಉತ್ತರ ಕನ್ನಡ
  • ವೆಂಕಟ್​ರಾಜ-ಜಿಲ್ಲಾಧಿಕಾರಿ, ರಾಯಚೂರು
  • ಗುರುದತ್ತ ಹೆಗ್ಡೆ-ವ್ಯವಸ್ಥಾಪಕ ನಿರ್ದೇಶಕ, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ
  • ಜಿ.ಲಕ್ಷ್ಮಿಕಾಂತರೆಡ್ಡಿ-ವ್ಯವಸ್ಥಾಪಕ ನಿರ್ದೇಶಕ, ನಾಗರಿಕ ಆಹಾರ ಮತ್ತು ಸರಬರಾಜು ನಿಗಮ
  • ಡಾ.ಕೆ.ಆನಂದ್-ಉಪ ಕಾರ್ಯದರ್ಶಿ, ಡಿಪಿಎಆರ್ (ಸೇವೆಗಳು)
  • ಜ್ಞಾನೇಂದ್ರಕುಮಾರ್ ಗಂಗ್ವಾರ್-ಜಂಟಿ ನಿರ್ದೇಶಕ (ತರಬೇತಿ), ಆಡಳಿತಾತ್ಮಕ ತರಬೇತಿ ಸಂಸ್ಥೆ- ಮೈಸೂರು
  • ಎಸ್.ಭರತ್-ಸಿಇಒ, ಗದಗ ಜಿಲ್ಲಾ ಪಂಚಾಯಿತಿ
  • ಡಾ.ಬಿ.ಸಿ.ಸತೀಶ್-ಜಿಲ್ಲಾಧಿಕಾರಿ, ಚಾಮರಾಜನಗರ
  • ಡಾ.ಎಂ.ಆರ್.ರವಿ-ಅಪರ ಮಿಷನ್ ನಿರ್ದೇಶಕ, ಸಕಾಲ ಮಿಷನ್
  • ಪಿ.ಎನ್.ರವೀಂದ್ರ-ಆಯುಕ್ತ, ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ
  • ಕರೀಗೌಡ-ಜಂಟಿ ನಿರ್ದೇಶಕ (ಆಡಳಿತ), ಆಡಳಿತಾತ್ಮಕ ತರಬೇತಿ ಸಂಸ್ಥೆ- ಮೈಸೂರು
  • ಡಾ.ಕೆ.ಹರೀಶ್​ಕುಮಾರ್-ಆಯುಕ್ತ, ಉದ್ಯೋಗ ಮತ್ತು ತರಬೇತಿ
  • ಕೆ.ಎನ್.ರಮೇಶ್-ಜಿಲ್ಲಾಧಿಕಾರಿ, ಚಿಕ್ಕಮಗಳೂರು
  • ಪಾಟೀಲ್ ಯಲಗೌಡ ಶಿವನಗೌಡ-ಜಿಲ್ಲಾಧಿಕಾರಿ, ತುಮಕೂರು
  • ಕೆ.ಶ್ರೀನಿವಾಸ-ಜಿಲ್ಲಾಧಿಕಾರಿ, ಬೆಂಗಳೂರು ಗ್ರಾಮಾಂತರ
  • ಸಿ.ಸತ್ಯಭಾಮ-ವ್ಯವಸ್ಥಾಪಕ ನಿರ್ದೇಶಕಿ, ಕರ್ನಾಟಕ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ
  • ಜೆಹೆರಾ ನಸೀಮ್​ಸಿಇಒ, ಬೀದರ್ ಜಿಲ್ಲಾ ಪಂಚಾಯಿತಿ
  • ವಿಜಯಮಹಾಂತೇಶ್ ಬಿ.ದಾನಮ್ಮನವರ್-ಸಿಇಒ, ದಾವಣಗೆರೆ ಜಿಲ್ಲಾ ಪಂಚಾಯಿತಿ
  • ಗೋವಿಂದರೆಡ್ಡಿ-ಸಿಇಒ, ವಿಜಯಪುರ ಜಿಲ್ಲಾ ಪಂಚಾಯಿತಿ
  • ಡಿ.ಭಾರತಿ-ನಿರ್ದೇಶಕಿ, ಕರ್ನಾಟಕ ಕೃಷಿ ಮಾರಾಟ ಮಂಡಳಿ
  • ಪ್ರಭುಲಿಂಗ ಕವಳಿಕಟ್ಟಿ-ವ್ಯವಸ್ಥಾಪಕ ನಿರ್ದೇಶಕ, ಹಟ್ಟಿ ಚಿನ್ನದ ಗಣಿ ಕಂಪನಿ
  • ಜಿ.ಎಂ.ಗಂಗಾಧರಸ್ವಾಮಿ-ಸಿಇಒ, ತುಮಕೂರು ಜಿಪಂ
  • ಕೆ.ನಾಗೇಂದ್ರಪ್ರಸಾದ್-ಸಿಇಒ, ಚಿಕ್ಕಬಳ್ಳಾಪುರ ಜಿಪಂ
  • ಕುಮಾರ-ಸಿಇಒ, ದಕ್ಷಿಣ ಕನ್ನಡ ಜಿಪಂ
  • ಸಂಗಪ್ಪ-ಸಿಇಒ, ಬೆಂಗಳೂರು ನಗರ ಜಿಪಂ
  • ಪರಮೇಶ್-ಸಿಇಒ, ಹಾಸನ ಜಿಪಂ