ಬೀಳಗಿ: ಬೀಳಗಿ ಮತ ಕ್ಷೇತ್ರಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಏತ ನೀರಾವರಿ ಯೋಜನೆ ಪ್ರಸ್ತಾವನೆಯನ್ನು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಸೇರಿಸಿಕೊಳ್ಳುವಂತೆ ಮುಖ್ಯಮಂತ್ರಿಗಳ ಶಿಫಾರಸಿನೊಂದಿಗೆ ಜಲ ಸಂಪನ್ಮೂಲ ಸಚಿವರಿಗೆ ಕಳುಹಿಸಲಾಗಿದೆ. ಇದರಿಂದ ಸಿದ್ದಾಪೂರ, ನಾಗರಾಳ, ತಾಂಡಾ, ಕೊಂತಿಕಲ ಮತ್ತು ಬೀಳಗಿಯ 5 ಸಾವಿರ ಎಕರೆ ಖುಷ್ಕಿ ಜಮೀನು ನೀರಾವರಿಯಾಗಲಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷರು ಹಾಗೂ ಶಾಸಕ ಜೆ.ಟಿ. ಪಾಟೀಲ ಹೇಳಿದರು.
ತಾಲೂಕಿನ ಸಿದ್ದಾಪೂರ ಗ್ರಾಮದಲ್ಲಿ ಶನಿವಾರ 2024-25 ಸಾಲಿನ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 10 ಲಕ್ಷ ರೂ.ಗಳ ಅನುದಾನದಲ್ಲಿ ನಿರ್ಮಾಣವಾಗುವ ಮಾರುತೇಶ್ವರ ದೇವಸ್ಥಾನದ ಸಮೀಪದ ಸಮುದಾಯ ಭವನ ಕಾಮಾಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸರ್ಕಾರದ ಗ್ಯಾರಂಟಿ ಯೋಜನೆಗಳು ಫಲಾನುಭವಿಗಳಿಗೆ ಅನುಕೂಲ ಒದಗಿಸುತ್ತಿವೆ. ಈ ಮುಂಚೆ ಅಕ್ಕಿಯ ಬದಲಾಗಿ ಹಣ ನೀಡಲಾಗುತ್ತಿತ್ತು. ಆದರೆ, ಇನ್ಮುಂದೆ 10 ಕೆಜಿ ಅಕ್ಕಿ ನೀಡಲಾಗುವುದು. ಇದನ್ನು ದುರ್ಬಳಕೆ ಮಾಡಿಕೊಂಡು, ಅಂಗಡಿಯವರಿಗೆ ಈ ಅಕ್ಕಿಯನ್ನು ಮಾರಾಟ ಮಾಡಿದರೆ ರೇಶನ್ ಕಾರ್ಡ್ ರದ್ದು ಮಾಡುವುದರ ಜತೆಗೆ ಗ್ಯಾರಂಟಿ ಯೋಜನೆಗಳು ಹಾಗೂ ಇತರೆ ಸರ್ಕಾರಿ ಸೌಲಭ್ಯಗಳನ್ನು ರದ್ದುಗೊಳಿಸಲಾಗುವುದು ಎಂದರು.
ವಿವಿಧ ಇಲಾಖೆಗಳ ಅನುದಾನದಡಿಯಲ್ಲಿ ಮಂಜೂರಾದ ಸಿಸಿ ರಸ್ತೆ, ಗಡ್ಡದೇಶ್ವರ ದೇವಸ್ಥಾನ ಜೀಣೋದ್ದಾರ, ವೆಂಕಪ್ಪ ಮರಡಿ ಸರ್ಕಾರಿ ಶಾಲೆಗೆ ಹೆಚ್ಚುವರಿ 2 ಕೊಠಡಿ ನಿರ್ಮಾಣ, ಸೋಮಲಿಂಗೇಶ್ವರ ದೇವಸ್ಥಾನ ಹಾಗೂ ದ್ಯಾಮವ್ವ ದೇವಸ್ಥಾನ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು.
ಭೀಮಪ್ಪಯ್ಯ ಸ್ವಾಮಿಗಳು, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ತೆಗ್ಗಿ ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಕಾಳಗಿ, ಕೃಷ್ಣಗೌಡ ಪಾಟೀಲ, ಜಿಪಂ ಮಾಜಿ ಅಧ್ಯಕ್ಷ ಯಮನಪ್ಪ ರೊಳ್ಳಿ, ಶ್ರೀಶೈಲ ಸೂಳಿಕೇರಿ, ಹುಚ್ಚಪ್ಪ ಕುಂಬಾರ ಪುಂಡಲೀಕ ಮುತ್ತೂರ, ತೆಗ್ಗಿ ಗ್ರಾಮದ ಹಿರಿಯರಾದ ವಿಠ್ಠಲ ಕಳಸನ್ನವರ, ನಂದಿ ಶುಗರ್ಸ್ ನಿರ್ದೇಶಕ ಸೋಮನಗೌಡ ಪಾಟೀಲ, ಗ್ರಾಪಂ ಸದಸ್ಯ ಸೋಮು ಕೂಗಟಿ, ನಿಂಗಪ್ಪ ದಳವಾಯಿ, ಮಾದಪ್ಪ ಮರಡಿ, ಕುಷ್ಣಪ್ಪ ಮೇಟಿ, ಅಪ್ಪಸಾಹೇಬ ಪಾಟೀಲ,, ಭೀಮಪ್ಪ ಕೂಗಟಿ, ಸಿದ್ದಾಪೂರ ಗ್ರಾಪಂ ಅಧ್ಯಕ್ಷೆ ಸಾವಿತ್ರಿ ಎಂ.ವಡವಾಣಿ ಇದ್ದರು.