ಕೆರೂರ: ಕೇಂದ್ರ ಪುರಸ್ಕೃತ ಅಮೃತ 2.0 ಯೋಜನೆಯಡಿ ಪಟ್ಟಣಕ್ಕೆ 5 ಕೋಟಿ ರೂ. ವೆಚ್ಚದ ಕುಡಿಯುವ ನೀರಿನ ಯೊಜನೆಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಶುಕ್ರವಾರ ಶಂಕುಸ್ಥಾಪನೆ ನೆರವೇರಿಸಿದರು.
ತದನಂತರ ಅಂಬೇಡ್ಕರ್ ವೃತ್ತದ ಹತ್ತಿರ 16 ಲಕ್ಷ ರೂಪಾಯಿ ವೆಚ್ಚದ ಹೈಟೆಕ್ ಶೌಚಗೃಹ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಮಾಡಿ ಪಪಂ ಆವರಣದಲ್ಲಿ ಮಾತನಾಡಿದ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪಟ್ಟಣದ ಅಭಿವೃದ್ಧಿಗೆ ಹಂತ ಹಂತಹಂತವಾಗಿ ಅನುನುದಾನ ತಂದು ಕಾಮಗಾರಿ ಮಾಡಲಾಗುತ್ತಿದೆ. ಜನರಿಗೆ ಮೂಲಸೌಕರ್ಯ ಒದಗಿಸುವುದೇ ನನ್ನ ಗುರಿಯಾಗಿದೆ. ಇದಕ್ಕೆ ಜನರು ಸಹಕಾರ ನೀಡಬೇಕು ಎಂದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಾ. ಎಂ.ಜಿ. ಕಿತ್ತಲಿ ಮಾತನಾಡಿದರು.
ಪಪಂ ಅಧ್ಯಕ್ಷೆ ನಿರ್ಮಲಾ ಮದಿ, ಉಪಾಧ್ಯಕ್ಷ ಮೋದಿನಸಾಬ ಚಿಕ್ಕೂರ, ಸದಸ್ಯರಾದ ವಿಠ್ಠಲಗೌಡ ಗೌಡರ, ಮಹಾನಂದ ಪೂಜಾರಿ, ನಾಮ ನಿರ್ದೇಶಿತ ಸದಸ್ಯ ಶ್ರೀಧರ ಕಾಂಬಳೆ, ಮುನಿಯಪ್ಪ ಚೂರಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ, ಎಂ. ಬಂಗೆನ್ನವರ, ಎಇ ನೀಖಿಲ್ ಕಡ್ಲಿಮಟ್ಟಿ, ಉಪ ತಹಸೀಲ್ದಾರ್ ವೀರೇಶ ಬಡಿಗೇರ, ಕಂದಾಯ ನಿರೀಕ್ಷಕ ಆನಂದ ಬೋವಿಮಠ, ಸದಾನಂದ ಮದಿ, ಸುರೇಶ ಪೂಜೇರಿ, ಡಾ. ಬಿ.ಕೆ. ಕೊವಳ್ಳಿ, ದೇವರಾಜ ಚೂರಿ, ಯಮನೂರ ವಡ್ಡರ, ಅಂದಾನಿ ಯಂಡಿಗೇರಿ ಮತ್ತಿತರರಿದ್ದರು.