I will work for the development of every village. 
ಜಿಲ್ಲೆ

ಪ್ರತಿ ಹಳ್ಳಿ ಅಭಿವೃದ್ಧಿಗೆ ಶ್ರಮಿಸುವೆ

Vijayapura - Desk - Doddanagouda Gudihindin

ಗುಳೇದಗುಡ್ಡ: ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಮೂಲಸೌಕರ್ಯ ಒದಗಿಸುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತೇನೆ. ಅದಕ್ಕೆ ಗ್ರಾಮಸ್ಥರೂ ಸಹಕಾರ ನೀಡಬೇಕು ಎಂದು ಶಾಸಕ ಭೀಮಸೇನ ಚಿಮ್ಮನಕಟ್ಟಿ ಹೇಳಿದರು.

ಸಮೀಪದ ಕಾಟಾಪುರದಲ್ಲಿ ಸೋಮವಾರ 2023-24ನೇ ಸಾಲಿನ ರಾಮದುರ್ಗ- ಮಾನ್ವಿ ಎಚ್‌ಎಸ್ 14 ಸಂಪರ್ಕ ಕಲ್ಪಿಸುವ 3.18 ಕಿಮೀ ರಸ್ತೆಗೆ 2 ಕೋಟಿ ರೂ. ವೆಚ್ಚದಲ್ಲಿ ಮರು ಡಾಂಬರೀಕರಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮದ ಯುವಕರು ವಾರದಲ್ಲಿ ಎರಡು ದಿನ ತಮ್ಮ ಗ್ರಾಮದಲ್ಲಿನ ಶಾಲೆ, ಆರೋಗ್ಯ ಕೇಂದ್ರಗಳ ಸ್ವಚ್ಛತೆಗೆ ಕೈಜೋಡಿಸಬೇಕು. ಅಂದಾಗ ಅಭಿವೃದ್ಧಿ ಕಾರ್ಯಗಳಿಗೆ ವೇಗ ಬರುತ್ತದೆ. ಕ್ಷೇತ್ರದ ಅಭಿವೃದ್ಧಿ ವಿಷಯದಲ್ಲಿ ತಾರತಮ್ಯ ಮಾಡುವುದಿಲ್ಲ ಎಂದರು.

ಬಾದಾಮಿ ಮತಕ್ಷೇತ್ರದಲ್ಲಿ ಒಟ್ಟು 32 ಪ್ರವಾಹ ಸಂತ್ರಸ್ತ ಪುನರ್ವಸತಿ ಕೇಂದ್ರಗಳಿದ್ದು, ಲಾನುಭವಿಗಳ ಮನೆಗಳಿಗೆ ಶಾಶ್ವತ ಹಕ್ಕುಪತ್ರ ತಲುಪಿಸಲು ಶ್ರಮ ವಹಿಸುತ್ತಿದ್ದೇನೆ ಎಂದರು.

ಗ್ರಾಪಂ ಅಧ್ಯಕ್ಷ ಹನುಮಂತ ಹೊಸಗೌಡ್ರ, ಉಪಾಧ್ಯಕ್ಷೆ ದೀಪಾ ತಳವಾರ, ಸದಸ್ಯರಾದ ನೀಲವ್ವ ಗಟ್ಟಿ, ಶರಣಪ್ಪಗೌಡ ಹೊಸಗೌಡ್ರ, ಬಸವರಾಜ ಕುಂಬಾರ, ಸುರೇಶ ಶಿವಪೂರ, ಪಿಡಿಒ ಎಂ.ಎಸ್. ವಾರದ, ಸುಭಾಸ ಗೌಡರ, ಬಸನಗೌಡ ಹೊಸಗೌಡ್ರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೆಇ ವಿವೇಕಾನಂದ ರೆಡ್ಡಿ, ಗುತ್ತಿಗೆದಾರ ಆರ್.ಎಚ್. ರಾಠೋಡ, ಸಿದ್ದಪ್ಪ ಬೇನಾಳ, ಮಂಜು ಗೌಡರ ಇದ್ದರು.