ಮನ್‌ಮುಲ್ ನಿರ್ದೇಶಕರಾಗಿ 2 ನೇ ಬಾರಿಗೆ ಆಯ್ಕೆಯಾದ ಎಸ್.ಪಿ.ಸ್ವಾಮಿ ಅವರನ್ನು ಮದ್ದೂರು ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಅಭಿಮಾನಿಗಳು ಅಭಿನಂದಿಸಿದರು. ಎಚ್.ಕೆ.ನಂದೀಶ್‌ಗೌಡ, ಕುಮಾರ್, ಅಭಿ, ನಾಗೇಶ್, ಡಾಬಾ ಕಿಟ್ಟಿ, ಅನಿಜಿತ್ ಇತರರು ಇದ್ದರು.  
ಜಿಲ್ಲೆ

ಡೇರಿಗಳ ಅಭಿವೃದ್ಧಿಗೆ ಶ್ರಮಿಸುವೆ

ರವಿಕುಮಾರ್ ಪಿ. ಕೆ

ಮದ್ದೂರು:  ಹಾಲು ಉತ್ಪಾದಕರ ಕಷ್ಟ, ಸಮಸ್ಯೆಗಳಿಗೆ ಸ್ಪಂದಿಸಿ ಡೇರಿಗಳ ಅಭಿವೃದ್ಧಿಗೆ ಶ್ರಮಿಸುವೆ ಎಂದು ಮನ್‌ಮುಲ್‌ಗೆ ನೂತನ ನಿರ್ದೇಶಕರಾಗಿ 2 ಬಾರಿಗೆ ಆಯ್ಕೆಯಾದ ಬಿಜೆಪಿ ಮುಖಂಡ ಎಸ್.ಪಿ.ಸ್ವಾಮಿ ತಿಳಿಸಿದರು.

ಪಟ್ಟಣದ ಮಳವಳ್ಳಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು ಹಾಗೂ ಅವರ ಬೆಂಬಲಿಗರಿಂದ ಅಭಿನಂದನೆ ಸ್ವೀಕರಿಸಿದ ನಂತರ ಅವರು ಮಾತನಾಡಿದರು.

ಹಾಲು ಉತ್ಪಾದಕರ ಅಭಿವೃದ್ಧಿಯ ನಿಟ್ಟಿನಲ್ಲಿ ದುಡಿಯುತ್ತೇನೆ. ಬಿಜೆಪಿ ಸಂಘಟನೆಯನ್ನು ತಾಲೂಕು ಮಟ್ಟದಲ್ಲಿ ಮತ್ತಷ್ಟು ಪ್ರಬಲಗೊಳಿಸುವಲ್ಲಿ ಶ್ರಮವಹಿಸುತ್ತೇನೆ. ಬಿಜೆಪಿಯಿಂದ ಟಿಕೆಟ್ ನೀಡಲಿಲ್ಲ ಎಂಬ ವಿಷಯದಲ್ಲಿ ಬೇಸರವಿಲ್ಲ. ಆದರೆ ಪಕ್ಷದಲ್ಲೇ ನನ್ನ ಬಗ್ಗೆ ಕೆಲವರು ಕುತಂತ್ರ ಮಾಡುತ್ತಿದ್ದವರ ಮೇಲೆ ಬೇಸರವಿದೆ, ಎಲ್ಲದಕ್ಕೂ ಕಾಲವೇ ಉತ್ತರ ನೀಡಲಿದೆ ಎಂದರು.

ಗ್ರಾಪಂ ಮಾಜಿ ಅಧ್ಯಕ್ಷ ನಂದೀಶ್‌ಗೌಡ, ಮುಖಂಡರಾದ ಚಿಕ್ಕ ಅಂಕನಹಳ್ಳಿ ಮನು, ಡಾಬಾ ಕಿಟ್ಟಿ, ನಾಗೇಶ್, ಕುಂದನಕುಪ್ಪೆ ಕುಮಾರ್, ಅಭಿ, ಅಣ್ಣೂರು ಮಹೇಂದ್ರ, ಅನಿಜಿತ್ ನಗರಕೆರೆ, ಮೋಹನ್, ಮಧು, ಸುಧಾಕರ್, ಹೇಮಂತ್ ಇದ್ದರು.