ಬೆಂಡಿಗಾನಹಳ್ಳಿಯಲ್ಲಿ ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ ಅವರನ್ನು ಜೇನುಗೂಡು ರೂರಲ್​ ಡೆವಲ್ಪಮೆಂಟ್​ ಆ್ಯಂಡ್​ ಕಲ್ಚರಲ್​ ಟ್ರಸ್ಟ್​ ವತಿಯಿಂದ ಸನ್ಮಾನಿಸಲಾಯಿತು. ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ಸೈಯದ್​ ಮಹಬೂಬ್​, ಎಸ್​.ಕೆ.ವಸಂತಕುಮಾರ್​, ತರಬಹಳ್ಳಿ ಹರೀಶ್​, ಬೆಟ್ಟಹಳ್ಳಿ ಗೋಪಿನಾಥ್​, ರಮಿತ್​ಕುಮಾರ್​ ಇತರರು ಇದ್ದರು. 
ಜಿಲ್ಲೆ

ಡೇರಿಗಳ ಶ್ರೇಯೋಭಿವೃದ್ಧಿಗೆ ಶ್ರಮಿಸುವೆ

ಸೂಲಿಬೆಲೆ : ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಗಳ ಪ್ರತಿನಿಧಿಯಾಗಿ ಸಹಕಾರ ಸಂಗಳ ಶ್ರೇಯೊಭಿವೃದ್ಧಿಗೆ ಶ್ರಮಿಸುವೆ ಎಂದು ಬೆಂಗಳೂರು ಹಾಲು ಒಕ್ಕೂಟದ ನೂತನ ನಿರ್ದೇಶಕ ಬಿ.ವಿ.ಸತೀಶಗೌಡ ಹೇಳಿದರು.

ಸೂಲಿಬೆಲೆ ಹೋಬಳಿ ಬೆಂಡಿಗಾನಹಳ್ಳಿಯಲ್ಲಿ ಜೇನುಗೂಡು ರೂರಲ್​ ಡೆವಲ್ಪಮೆಂಟ್​ ಆ್ಯಂಡ್​ ಕಲ್ಚರಲ್​ ಟ್ರಸ್ಟ್​ ಹಾಗೂ ನೂರಾರು ಕಾಂಗ್ರೆಸ್​ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಹೊಸಕೋಟೆ ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಗಳ ಅಭಿವೃದ್ಧಿಗೆ ನೂತನ ಯೋಜನೆ ರೂಪಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದರು.

ಶಾಸಕ ಶರತ್​ಬಚ್ಚೇಗೌಡರ ಅಭಿವೃದ್ದಿ ಕಾರ್ಯಕ್ರಮಗಳು ಹಾಗೂ ಮಾಜಿ ಪಶುಸಂಗೋಪನ ಸಚಿವ ಬಿ.ಎನ್​.ಬಚ್ಚೇಗೌಡ ಅವರು ತಾಲೂಕಿಗೆ ನೀಡಿರುವ ಕೊಡುಗೆ ಅಪಾರವಾಗಿದ್ದು, ಅವರ ಹಾದಿಯಲ್ಲಿ ಸೇವೆ ಮುಂದುವರಿಸುತ್ತೇನೆ ಎಂದರು.ಜೇನುಗೂಡು ರೂರಲ್​ ಡೆವಲ್ಪಮೆಂಟ್​ ಆ್ಯಂಡ್​ ಕಲ್ಚರಲ್​ ಟ್ರಸ್ಟಿನ ಉಪಾಧ್ಯಕ್ಷ ಕೆ.ಎಂ.ಚೌಡೇಗೌಡ, ನಿರ್ದೇಶಕರಾದ ಸೈಯದ್​ ಮಹಬೂಬ್​, ಎಸ್​.ಕೆ.ವಸಂತಕುಮಾರ್​, ತರಬಹಳ್ಳಿ ಹರೀಶ್​, ಅತ್ತಿಬೆಲೆ ಮಂಜುನಾಥ್​, ಸಹಕಾರ ಬ್ಯಾಂಕ್​ ಮಾಜಿ ನಿರ್ದೇಶಕಿ ಕೆ.ವಿ.ವಿಜಯಲ್ಮ, ಪ್ರಧಾನ ಕಾರ್ಯದರ್ಶಿ ಬೆಟ್ಟಹಳ್ಳಿ ಗೋಪಿನಾಥ್​, ರಮಿತ್​ಕುಮಾರ್​, ವೀಣಾ, ಮುನಿಶಾಮಪ್ಪ, ಬೆಂಡಿಗಾನಹಳ್ಳಿ ಡೇರಿ ಕಾರ್ಯದರ್ಶಿ ಲೋಕೇಶ್​ಬಾಬು, ಸಿದ್ದೇನಹಳ್ಳಿ ರಮೇಶ್​, ಬೆಟ್ಟಹಳ್ಳಿ ನಾಗೇಶ್​ಗೌಡ, ಮಂಜುನಾಥ್​, ತಾಲೂಕಿನ ಹಾಲು ಡೇರಿ ಅಧ್ಯಕ್ಷರು, ಕಾರ್ಯದರ್ಶಿಗಳು, ಬಮುಲ್​ ಅಧಿಕಾರಿ ವರ್ಗ ಇದ್ದರು.

ಶಾಸಕ ಶರತ್​ ಬಚ್ಚೇಗೌಡರ ಸಹಕಾರದಲ್ಲಿ 138 ಮತಗಳನ್ನು ಪಡೆದು ಜಯಶಾಲಿ ಯಾಗಿದ್ದು ಮತ ನೀಡಿದ ಎಲ್ಲರಿಗೂ ಚಿರಋಣಿಯಾಗಿರುವೆೆ. | ಬಿ.ವಿ.ಸತೀಶಗೌಡ, ನೂತನ ನಿರ್ದೇಶಕ ಬಮುಲ್​ ಸುದೀರ್ 35 ವರ್ಷಗಳಿಂದ ಸಹಕಾರ ರಂಗದಲ್ಲಿರುವ ಬಿ.ವಿ.ಸತೀಶಗೌಡರಿಗೆ ಸಹಕಾರ ಸಂದವರಿಂದ ಆಶೀರ್ವಾದ ದೊರೆತಿದ್ದು, ಡೇರಿಗಳು ಹಾಗೂ ಪಶುಪಾಲನೆ ಅವಲಂಬಿತ ಕುಟುಂಬಗಳಿಗೆ ಅನುಕೂಲವಾಗುವ ಸೇವಾ ಕಾರ್ಯಕ್ರಮಗಳು ಜಾರಿಯಾಗಬೇಕು. | ಬಿಎನ್​.ಬಚ್ಚೇಗೌಡ, ಮಾಜಿ ಸಂಸದ